ಮಡಿಕೇರಿ, ಫೆ. ೧೭: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ೨೦೨೧ ನೇ ಸಾಲಿನಲ್ಲಿ ೨ ದಿನಗಳ ರಸ್ತೆ ಸಂಚಾರ ಸಮೀಕ್ಷೆಯು ತಾ. ೨೩ ರ ಬೆಳಗ್ಗೆ ೬ ಗಂಟೆಗೆ ಆರಂಭವಾಗಲಿದ್ದು, ೨೫ ರವರೆಗೆ ನಡೆಯಲಿದೆ. ಮತ್ತು ರಸ್ತೆ ಸಂಚಾರ ಸಮೀಕ್ಷೆಯಲ್ಲಿ ರಸ್ತೆ ಸಂಚಾರದ ಬಗ್ಗೆ ವಿವರಗಳನ್ನು ಸಂಗ್ರಹಿಸಲು ಜಿಲ್ಲೆಯಲ್ಲಿ ಒಟ್ಟು ೬೭ ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವುದು.
ರಸ್ತೆ ಸಂಚಾರದ ಮಾಹಿತಿಯನ್ನು ವಿಶ್ಲೇಷಿಸಿ, ರಾಜ್ಯ ಮಟ್ಟದಲ್ಲಿ ರಸ್ತೆಗಳ ಅಭಿವೃದ್ದಿ ಕಾರ್ಯಕ್ರಮ ರೂಪಿಸಿ ಕಾರ್ಯರೂಪಕ್ಕೆ ತರಲು ಅಂದರೆ ರಸ್ತೆಗಳ ಪಥಗಳನ್ನು ವಿಸ್ತರಿಸಲು ಮತ್ತು ರಸ್ತೆ ಮೇಲ್ದರ್ಜೆಗೇರಿಸುವುದು ಮತ್ತಿತರ ನಿರ್ಣಯ ತೆಗೆದುಕೊಳ್ಳಲು ಉಪಯುಕ್ತವಾಗಿದೆ. ತಾ. ೨೩ ರಿಂದ ೨೫ ರವರೆಗೆ ರಸ್ತೆ ಸಂಚಾರ ಸಮೀಕ್ಷೆ ನಡೆಯಲಿದೆ ಎಂದು ಹಾಸನ ಜಿಲ್ಲೆಯ ಹಾಸನ ವೃತ್ತ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸೂಪರಿಂಟೆAಡಿAಗ್ ಎಂಜಿನಿಯರ್ ತಿಳಿಸಿದ್ದಾರೆ.