ವೀರಾಜಪೇಟೆ, ಫೆ. ೧೭: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಖಾಸಗಿ ಜಲ್ಲಿ ಕ್ರಷರ್‌ನಲ್ಲಿ ಜಲ್ಲಿ ತುಂಬಿದ ಲಾರಿ ಆಕಸ್ಮಿಕವಾಗಿ ಹಿಂದಕ್ಕೆ ಚಲಿಸಿ ಚಾಲಕ ಜೋಸೆಫ್ (೨೩) ಎಂಬಾತನು ಇಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ದೂರು ದೊರೆತ ಮೇರೆ ಇಲ್ಲಿನ ಗ್ರಾಮಾಂತರ ಪೊಲೀಸರು ಕ್ರಷರ್ ಸಂಸ್ಥೆಗೆ ಸೇರಿದ ಟಿಪ್ಪರ್‌ನ (ಕೆಎ೦೧ ಎಂ.ಎಚ್. ೭೧೨೨) ಚಾಲಕ ಅನಿಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ,

ಚಾಲಕ ಜೋಸೆಫ್ ಲಾರಿಯಲ್ಲಿ ಕ್ರಷರ್‌ನಿಂದ ಜಲ್ಲಿ ತುಂಬಿಸಿ ಚೇರಂಬಾಣೆಗೆ ಸಾಗಿಸಲು ಲಾರಿಯೊಂದಿಗೆ ಕ್ರಷರ್‌ಗೆ ಬಂದಿದ್ದಾಗ ಸಂಸ್ಥೆಗೆ ಸೇರಿದ ಜಲ್ಲಿ ತುಂಬಿದ ಟಿಪ್ಪರ್ ಹಿಂಬದಿಗೆ ಚಲಿಸುತ್ತಿದ್ದಾಗ ಹಿಂಬದಿ ಟಯರ್‌ಗೆ ಮರದ ಕಟ್ಟೆ ಇಡಲು ಯತ್ನಿಸುತ್ತಿದ್ದಾಗ ಟಯರ್ ಆತನ ಮೇಲೆ ಹರಿದು ತೀವ್ರ ಗಾಯಗೊಂಡಿದ್ದವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾಗ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮೃತ ಜೋಸೇಫ್ ಚೇರಂಬಾಣೆಯಿAದ ಲಾರಿಯಲಿ ಜಲ್ಲಿ ತುಂಬಿಸುವ ಸಲುವಾಗಿ ಕ್ರಷರ್‌ಗೆ ಬಂದಿದ್ದಾಗ ಈ ಅಪಘಾತ ಸಂಭವಿಸಿದೆ.