ನಿರ್ಗತಿಕ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ

ಮೈಸೂರು, ಫೆ. ೧೭: ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಪೈಶಾಚಿಕ ಕೃತ್ಯ ವರದಿಯಾದ ಮಾರನೇ ದಿನವೇ ಮೈಸೂರಿನಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದ್ದು, ಕಳೆದ ರಾತ್ರಿ ನಿರ್ಗತಿಕ ಮಹಿಳೆಯೊಬ್ಬರ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿದ್ದಾರೆ. ಮೈಸೂರಿನ ಬಿ.ಎನ್. ಸ್ಟಿçÃಟ್‌ನಲ್ಲಿ ಈ ನಡೆದಿದ್ದು, ಮಂಗಳವಾರ ರಾತ್ರಿ ಕಲ್ಲಿನ ಬೆಂಚ್ ಮೇಲೆ ಮಲಗಿದ್ದ ೪೫ ವರ್ಷದ ಮಹಿಳೆ ಮೇಲೆ ಪೋಕರಿಗಳ ಗುಂಪೊAದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿದೆ. ರಾತ್ರಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು ಬಿಎನ್ ಸ್ಟಿçÃಟ್‌ನ ಬಳೆಯ ಅಂಗಡಿಯ ಬಳಿ ಮೂವರು ಅನುಮಾನಾಸ್ಪದವಾಗಿ ನಿಂತಿರುವುದನ್ನು ನೋಡಿ, ಅವರನ್ನು ವಿಚಾರಿಸಲು ತೆರಳಿದ್ದಾರೆ. ಆದರೆ ಪೊಲೀಸರು ಬರುತ್ತಿದ್ದಂತೆ ಮೂವರೂ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಪೊಲೀಸರು ಅರೆನಗ್ನವಾಗಿ ನೆಲದ ಮೇಲೆ ಮಲಗಿದ್ದ ಮಹಿಳೆಯನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಮತ್ತು ಪೊಲೀಸರು, ಶ್ವಾನದಳ ಭೇಟಿ ನೀಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದ್ದು, ಪೊಲೀಸರು ಆರೋಪಿಗಳ ಶೋಧಕಾರ್ಯ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿ ಹತ್ಯೆ: ಮಗ-ಸಹೋದರನ ಬಂಧನ

ಬೆAಗಳೂರು, ಫೆ. ೧೭: ನಗರದ ಉದ್ಯಮಿಯೊಬ್ಬರ ಹತ್ಯೆಯಾದ ಒಂದು ವರ್ಷದ ನಂತರ ತಲಘಟ್ಟಪುರ ಪೊಲೀಸರು ರೂ. ೧೦೦ ಕೋಟಿ ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಸುಪಾರಿ ನೀಡಿದ್ದ ಆರೋಪದಡಿ ಅವರ ಮಗ ಮತ್ತು ಸಹೋದರನನ್ನು ಬಂಧಿಸಿದ್ದಾರೆ. ೨೦೨೦ ರ ಫೆಬ್ರವರಿ ೧೪ ರಂದು ಬಳ್ಳಾರಿ ಸ್ಟೀಲ್ ಅಂಡ್ ಅಲಾಯ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಂಗನಮಾಲೆ ಮಾಧವ್ (೭೦) ಗುಬ್ಬಲಾಲಾ ಮುಖ್ಯ ರಸ್ತೆಯ ರಾಯಲ್ ಪಾಮ್ಸ್ ಲೇಔಟ್ ಬಳಿ ಹಾಡ ಹಗಲೇ ಕೊಲೆಯಾಗಿದ್ದರು. ದಾಳಿಕೋರರು ಅವರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದರು. ಪ್ರಕರಣ ಸಂಬAಧ ಜೂನ್‌ನಲ್ಲಿ ಪೊಲೀಸರು ಒಂಬತ್ತು ಸುಪಾರಿ ಕೊಲೆಗಾರರನ್ನು ಬಂಧಿಸಿದ್ದರು. ಆದರೆ, ಮಾಧವ್ ಅವರ ಮಗ ಹರಿಕೃಷ್ಣ (೪೨) ಮತ್ತು ಸಹೋದರ ಶಿವರಾಮ್ ಪ್ರಸಾದ್ (೫೦) ಮಾತ್ರ ನಾಪತ್ತೆಯಾಗಿದ್ದರು. ಬಳ್ಳಾರಿ ಸ್ಟೀಲ್ ಅಂಡ್ ಅಲಾಯ್ಸ್ ಲಿಮಿಟೆಡ್ ಬಳ್ಳಾರಿಯಲ್ಲಿ ೨,೦೦೦ ಎಕರೆ ಭೂಮಿಯನ್ನು ಹೊಂದಿದೆ ಮತ್ತು ಸಹೋದರರು ಅದೇ ಜಾಗಕ್ಕಾಗಿ ಹೋರಾಟಕ್ಕಿಳಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಕ್ರಮವಾಗಿ ಮರಗಳಿಗೆ ಕತ್ತರಿ:ಅರಣ್ಯಾಧಿಕಾರಿಗಳ ಅಮಾನತು

ಬೆಂಗಳೂರು, ಫೆ. ೧೭: ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಲ್ಲಿ ಕಾಡುಗಳ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಏಳು ಮಂದಿ ಅರಣ್ಯ ಇಲಾಖೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಅಧಿಕಾರಿಗಳನ್ನು ಚಿಕ್ಕಮಗಳೂರು ವಿಭಾಗದ ಪ್ರಭಾರ ಸರ್ವೆ ರೇಂಜರ್ ದಿನೇಶ್, ಫಾರೆಸ್ಟರ್‌ಗಳಾದ ಮಧುಸೂದನ್, ಶಿವರಾಜನಾಯಕ್, ಮೂಡಿಗೆರೆ ಉಪವಿಭಾಗದ ಅರಣ್ಯ ರಕ್ಷಕ ಸುರೇಶ್, ಕೊಪ್ಪ ವಿಭಾಗದ ಸೆಕ್ಷನ್ ಫಾರೆಸ್ಟರ್ ಯಾಸಿನ್ ಬಾಷಾ, ಅರಣ್ಯ ರಕ್ಷಕ ನವೀನ್ ಕುಮಾರ್, ಸರ್ವೆ ಫಾರೆಸ್ಟರ್ ಅರುಣ್‌ಕುಮಾರ್ ಬಾರಂಗಿ ಎಂದು ಹೇಳಲಾಗುತ್ತಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಿಟ್ಟಿನಲ್ಲಿ ಈ ಕ್ರಮ ವಹಿಸಲಾಗಿದೆ. ಇಲಾಖೆ ವಿಚಾರಣೆ ಕಾಯ್ದಿರಿಸಿ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯಲು ಅನುಮತಿ ನೀಡುವಲ್ಲಿ ಈ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಪೆಟ್ರೋಲ್‌ಗೆ ರೂ. ೧೦೦: ಹಿಂದಿನ ಸರ್ಕಾರವನ್ನು ಹೊಣೆ ಮಾಡಿದ ಪ್ರಧಾನಿ

ನವದೆಹಲಿ, ಫೆ. ೧೭: ಪೆಟ್ರೋಲ್ ಪ್ರತಿ ಲೀಟರ್ ಬೆಲೆ ರೂ. ೧೦೦ ದಾಟಿದ್ದು ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಬಗ್ಗೆ ಹಿಂದಿನ ಸರ್ಕಾರಗಳು ಗಮನಹರಿಸದಿದ್ದುದೇ ಇಂದು ಮಧ್ಯಮ ವರ್ಗದವರಿಗೆ ಹೊರೆಯಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಸುಮ್ಮನಿದ್ದ ಪ್ರಧಾನಿ ಮೋದಿ ಅವರು ಇಂದು ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚೆನ್ನೆöÊನಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಹಿಂದಿನ ಸರ್ಕಾರವನ್ನು ಹೊಣೆಯಾಗಿಸಿದ್ದಾರೆ. ನಮ್ಮ ಹಿಂದಿನ ಸರ್ಕಾರಗಳು ಇಂಧನಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದುದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣವಾಗಿದೆ. ೨೦೧೯-೨೦ನೇ ಸಾಲಿನಲ್ಲಿ ಶೇ. ೮೫ರಷ್ಟು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಅಗತ್ಯ ಇಂಧನಗಳ ಬೆಲೆ ಹೆಚ್ಚಳ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ ಎಂದರು. ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರು, ಬಡವರಿಗೆ ತೀವ್ರ ಹೊರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂಧನದ ಆಮದಿನ ಮೇಲೆ ನಾವು ಇಷ್ಟೊಂದು ಪ್ರಮಾಣದಲ್ಲಿ ಅವಲಂಬನೆ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸೇರಲು ೧೫ ರಿಂದ ೨೦ ಕಾಂಗ್ರೆಸ್ ಶಾಸಕರ ಆಸಕ್ತಿ

ಬೆಂಗಳೂರು, ಫೆ. ೧೭: ಭಾರತೀಯ ಜನತಾ ಪಕ್ಷದ ಬಲವರ್ಧನೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಆಡಳಿತವನ್ನು ಮೆಚ್ಚಿಕೊಂಡು ರಾಜ್ಯದಲ್ಲೂ ೧೫ ರಿಂದ ೨೦ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಉತ್ಸಾಹ ತೋರುತ್ತಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‌ಕುಮಾರ್ ಕಟೀಲ್ ಅವರು ತಿಳಿಸಿದರು. ವಿಜಯಪುರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಭೆಯ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲೂ ಅಸಮಾಧಾನ ಹೊಂದಿದ ಶಾಸಕರಿದ್ದಾರೆ. ಆದರೆ, ನಮಗೆ ಅವರ ಅವಶ್ಯಕತೆ ಇಲ್ಲ ಎಂದರು. ಮೂರು ವಿಧಾನಸಭಾ ಚುನಾವಣೆ ಮತ್ತು ಒಂದು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ನ ಆಧಾರದಲ್ಲಿ ರಚಿಸಿದ ಟ್ರಸ್ಟ್ ಶ್ರೀರಾಮ ಮಂದಿರ ನಿರ್ಮಿಸುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಅವರು ತಿಳಿಸಿದರು.