ಶನಿವಾರಸಂತೆ, ಏ. ೧೭: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಬೈಕ್ (ಕೆಎ ೧೨ ಯು ೪೪೬೬) ಹಾಗೂ ಕಾರು (ಕೆಎ ೧೨ ಝೆಡ್ ೬೦೧೧) ಅವಘಡಗೊಂಡು ಮೂವರು ಗಾಯಗೊಂಡ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣಗೂರು ಗ್ರಾಮದ ಮಂಜುನಾಥ್ ತನ್ನ ಬೈಕ್ನಲ್ಲಿ ಪತ್ನಿ ಕಲಾವತಿ, ಮಗಳು ಸಾಕ್ಷಿ ಮೂವರು ಹಾಸನ ಜಿಲ್ಲೆಯ ಮಲ್ಲೇನಹಳ್ಳಿಯ ಈಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸ್ ಬರುತ್ತಿರುವಾಗ ಮಾಲಂಬಿ ಗ್ರಾಮದ ರಸ್ತೆಯಲ್ಲಿ ಮಾಲಂಬಿ ಗ್ರಾಮದ ರವೀಂದ್ರ ಅವರ ಕಾರು ಡಿಕ್ಕಿಯಾಗಿದೆ. ಕಲಾವತಿಗೆ ಸೊಂಟ, ಎದೆಯ ಭಾಗ, ಎರಡು ಕೈಗಳಿಗೆ ಪೆಟ್ಟಾಗಿದೆ. ಮಗಳು ಸಾಕ್ಷಿಗೆ ಪೆಟ್ಟಾಗಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಂಡ ಮಂಜುನಾಥ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಾವತಿ ತಾ. ೧೬ ರಂದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ.