ಸುAಟಿಕೊಪ್ಪ, ಫೆ. ೧೬: ಪುಲ್ವಾಮಾ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸುಂಟಿ ಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ರಾಮ ಮಂದಿರದಲ್ಲಿ ಶ್ರದ್ಧಾಂಜಲಿ ಯನ್ನು ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವಸಂತಿ, ಈಶ್ವರ, ಸುಧೀಶ್ ಅಮರ ವೀರರ ಭಾವಚಿತ್ರಗಳನ್ನು ಇರಿಸಿ ದೀಪವನ್ನು ಬೆಳಗಿಸಿ ವೀರಮರಣವನ್ನಪ್ಪಿದ ಯೋಧ ಆತ್ಮಶಾಂತಿಗಾಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಿದರು.

ನಿವೃತ್ತ ಯೋಧ ಶೇಖರ್ ಯೋಧರ ಬಗ್ಗೆ ಮಾತನಾಡಿದರು. ಪರಿಣಿತ ಈ ಕರಾಳ ದಿನದ ಬಗ್ಗೆ ದೇಶÀ ಭಕ್ತಿಗೀತೆ ಹಾಡಿದರು. ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ್‌ಗಳಾದ ಬಿ.ಕೆ. ಪ್ರಶಾಂತ್, ವಾಸುದೇವ್, ಶಿವು, ಸೂರ್ಯ ಕಾಂತ್, ರಮೇಶ್, ಪದ್ಮನಾಭ, ಪುನೀತ್, ಸಂತೋಷ್, ರಾಕೇಶ್, ಪ್ರಶಾಂತ್, ದಯಾನಂದ, ಶಾಂತಿ, ಸುಶಾನ, ಗೀತಾ ಹಾಗೂ ಮತ್ತಿತರರು ಇದ್ದರು.