ಮಡಿಕೇರಿ, ಫೆ. ೧೬: ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನಗರದ ಸಮಸ್ಯೆಗಳ ಕುರಿತು ಕೊಡವ ಸಮಾಜ ಕಟ್ಟಡದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಂದರ್ಭ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಗರಸಭಾ ಆಯುಕ್ತ ರಾಮ್‌ದಾಸ್ ಅವರು, ನಗರದ ಗಣಪತಿ ಬೀದಿಯನ್ನು ತಕ್ಷಣ ವಿಸ್ತರಿಸುವ ಕ್ರಮ ಮಡಿಕೇರಿ, ಫೆ. ೧೬: ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನಗರದ ಸಮಸ್ಯೆಗಳ ಕುರಿತು ಕೊಡವ ಸಮಾಜ ಕಟ್ಟಡದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಈ ಸಂದರ್ಭ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಗರಸಭಾ ಆಯುಕ್ತ ರಾಮ್‌ದಾಸ್ ಅವರು, ನಗರದ ಗಣಪತಿ ಬೀದಿಯನ್ನು ತಕ್ಷಣ ವಿಸ್ತರಿಸುವ ಕ್ರಮ ಬೀಟ್ ವ್ಯವಸ್ಥೆ ಜಾರಿಗೊಂಡಿದ್ದು, ಆಯಾ ವಾರ್ಡ್ಗಳಲ್ಲಿ ೫೦ ಸದಸ್ಯರ ಸಮಿತಿ ರಚಿಸಲು ಅವಕಾಶವಿ ರುವುದರಿಂದ ಸಾರ್ವಜನಿಕರು ಮುಂದೆ ಬರಬೇಕೆಂದರು. ಸಂಚಾರ ನಿಯಮದಲ್ಲಿ ಸೀಟ್‌ಬೆಲ್ಟ್ ಅಳವಡಿಕೆ ಕಡ್ಡಾಯವಾಗಿದ್ದು, ಚಾಲಕರು ಅದನ್ನು ಪಾಲಿಸುವಂತೆಯೂ, ವಾಹನ ಚಾಲನಾ ಸಂದರ್ಭ ಮೊಬೈಲ್ ಫೋನ್ ಬಳಸದಂತೆಯೂ ಸೂಚನೆ ನೀಡಿದರು.

ವಾಹನ ಪಾರ್ಕಿಂಗ್ ಜಾಗಗಳಲ್ಲಿ ಪೈಂಟ್ ಅಳವಡಿಸುವ ಜವಾಬ್ದಾರಿ ಯನ್ನು ಎಂ.ಎಲ್.ಸಿ. ಎಂ.ಪಿ. ಸುನಿಲ್ ಸುಬ್ರಮಣಿ ಅವರು ಒಪ್ಪಿಕೊಂಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

(ಮೊದಲ ಪುಟದಿಂದ) ಡ್ರಗ್ಸ್ ಸೇವಿಸುತ್ತಿರುವವರ ಮತ್ತು ಸರಬರಾಜು ಮಾಡುತ್ತಿರುವವರ ಬಗ್ಗೆ ಮಾಹಿತಿ ನೀಡಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ನಗರದ ನಾಗರಿಕರು ಕೆಳಗಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಹೀರ್: ಮಾರುಕಟ್ಟೆಯ ಸೆಲ್ಲರ್ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದು.

ಇಸ್ಮಾಯಿಲ್: ಶುಕ್ರವಾರದ ಸಂತೆಯ ಕಸವನ್ನು ಮಂಗಳವಾರ ಸ್ವಚ್ಛಗೊಳಿಸಲಾಗುತ್ತಿದೆ. ಅದನ್ನು ಸರಿಪಡಿಸಬೇಕು. ಎಲ್ಲೆಂದರಲ್ಲಿ ಮೀನು ವ್ಯಾಪಾರ ನಡೆಯುತ್ತಿದ್ದು, ಸರಿಯಾದ ವ್ಯವಸ್ಥೆ ಆಗಬೇಕು.

ಸಂತೆ ದಿನ ಸರಕು ವಾಹನಗಳನ್ನು ಸರಿಯಾಗಿ ನಿಲ್ಲಿಸುವ ವ್ಯವಸ್ಥೆ ಆಗಬೇಕು. ಹೈಟೆಕ್ ಮಾರುಕಟ್ಟೆಯಲ್ಲಿ ವಿದ್ಯುತ್ ಸರಿಪಡಿಸಬೇಕು. ನೀರಿನ ಹಾಗೂ ಶೌಚಾಲಯದ ವ್ಯವಸ್ಥೆ ಸರಿ ಆಗಬೇಕು.

ನವೀನ್ ಅಂಬೆಕಲ್: ರಾಜಾಸೀಟು ಪಾರ್ಕಿಂಗ್ ಸರಿಪಡಿಸಿ.

ಬಿ.ಎಂ. ರಾಜೇಶ್: ಮಹದೇವಪೇಟೆಯಲ್ಲಿ ಇಂಟರ್‌ಲಾಕ್ ಕೆಲಸ ಪೂರ್ಣಗೊಂಡಿಲ್ಲ; ತುರ್ತು ಗಮನ ಹರಿಸಬೇಕು.

ಎಂ.ಬಿ. ದೇವಯ್ಯ: ಪಾರ್ಕಿಂಗ್ ಸಮಸ್ಯೆ ಗಂಭೀರವಾಗಿದ್ದು, ಹಳೆಯ ಸರಕಾರಿ ಪ್ರೆಸ್, ಎಸ್‌ಬಿಐ ಹಿಂಭಾಗ ಬಳಸಬಹುದು. ಮಾರ್ಕೆಟ್‌ನಿಂದ ಮಹದೇವಪೇಟೆಗೆ ತಿರುಗುವ ರಸ್ತೆ ಇಕ್ಕಟ್ಟಾಗಿದ್ದು, ಅದರ ಎದುರುಗಡೆ ಆಟೋ ರಿಕ್ಷಾಗಳನ್ನು ನಿಲ್ಲಿಸಬಾರದು.

ಬಿ.ಜಿ. ಅನಂತಶಯನ: ಅನಧಿಕೃತ ಹೋಂ ಸ್ಟೇಗಳ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಕೆಲವರು ಸರ್ವೀಸ್ ಅಪಾರ್ಟ್ಮೆಂಟ್ ಹೆಸರಿನಲ್ಲಿ ನೋಂದಾಯಿಸಿಕೊAಡಿದ್ದು, ಈ ಬಗ್ಗೆ ಗಮನ ಹರಿಸಬೇಕು. ಪ್ರಮುಖ ಪಟ್ಟಣಗಳಲ್ಲಿ ಇರುವಂತೆ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಹುಡುಕಬೇಕು. ಕಾಲೇಜು ರಸ್ತೆ ಮತ್ತು ಕೊಹಿನೂರ್ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ಶುಲ್ಕ ನಿಗದಿಪಡಿಸಬೇಕು.

ಮಹಮ್ಮದ್ ಆಲಿ: ಇಂದಿರಾ ನಗರದ ಮೂಲಕ ಹಲವಷ್ಟು ವಾಹನಗಳು ತಾಳತ್ತ್ಮನೆಗೆ ಹೋಗುತ್ತಿವೆ. ಮಧ್ಯ ರಾತ್ರಿಯೂ ಓಡಾಟ ನಡೆಯುತ್ತಿದೆ ಈ ಬಗ್ಗೆ ತುರ್ತು ಗಮನ ಹರಿಸಬೇಕು.

ಜಿ. ಚಿದ್ವಿಲಾಸ್: ಕೆಲವು ಪ್ರವಾಸಿ ವಾಹನಗಳಲ್ಲಿ ಟಿಂಟೆಡ್ ಗಾಜುಗಳನ್ನು ಅಳವಡಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಅಗತ್ಯ. ಕೆಲವು ವಾಹನಗಳಲ್ಲಿ ಅನಧಿಕೃತವಾಗಿ ಪೊಲೀಸ್, ಪ್ರೆಸ್ ಹಾಗೂ ಇತರ ಇಲಾಖೆಗಳ ಹೆಸರುಗಳನ್ನು ದುರುಪಯೋಗ ಪಡಿಸಲಾಗುತ್ತಿದೆ. ಚೌಕ್, ದೇವಯ್ಯ ವೃತ್ತ, ತಿಮ್ಮಯ್ಯ ಸರ್ಕಲ್ ಹಾಗೂ ಇತರೆಡೆ ಸಿಗ್ನಲ್ ಲೈಟ್‌ಗಳನ್ನು ಅಳವಡಿಸುವುದು ಸೂಕ್ತ.

ಪ್ರೆಸ್‌ಕ್ಲಬ್ ಪಕ್ಕದಲ್ಲಿ ತಿರುವಿನಲ್ಲೇ ಹಲವಷ್ಟು ವಾಹನಗಳು ನಿಂತಿರುವುದರಿAದ ವಾಹನ ಚಾಲಕರಿಗೆ ಕಷ್ಟವಾಗುತ್ತಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿ ಬಲ ತಿರುವು ಇಲ್ಲವೆಂದು ಫಲಕ ಅಳವಡಿಸಬೇಕು. ರಾಜಾಸೀಟು ಬಳಿ ವಾಹನ ಪಾರ್ಕಿಂಗ್‌ಗೆ ಶುಲ್ಕ ವಿಧಿಸಿ ಕ್ರಮಬದ್ಧವಾಗಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಪ್ರವಾಸಿ ಕೇಂದ್ರಗಳಲ್ಲಿ ಕನಿಷ್ಟ ವಾರಾಂತ್ಯದಲ್ಲಿ ಮಾಸ್ಕ್ ಅಳವಡಿಕೆ, ಸಾಮಾಜಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ನಗರಸಭೆ ಅಥವಾ ಪೊಲೀಸ್ ಇಲಾಖೆಯ ವಾಹನಗಳಲ್ಲಿ ಮೈಕ್ ಮೂಲಕ ಜಾಗೃತಿ ಮೂಡಿಸಬೇಕು. ಡ್ರಗ್ಸ್ ಹಾವಳಿ ಬಗ್ಗೆ ಇಲಾಖೆ ಇನ್ನಷ್ಟು ಕ್ರಮಕೈಗೊಳ್ಳಬೇಕು. ಪೊಲೀಸ್ ಠಾಣೆ ಪಕ್ಕ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.

ಜೂನಿಯರ್ ಕಾಲೇಜು ರಸ್ತೆಯನ್ನು ವಿಸ್ತರಿಸಬೇಕು. ಲಾರಿ ನಿಲ್ದಾಣವನ್ನು ಹೊಸ ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವುದು ಒಳಿತು. ಮಾರುಕಟ್ಟೆಯಿಂದ ಹಿಲ್ ರಸ್ತೆಯಲ್ಲಿ ಸ್ವಲ್ಪದೂರದವರೆಗೆ ಮಾತ್ರ ‘ಟೂ ವೇ’ ಇದ್ದು ಅದನ್ನು ಸಿ.ವಿ. ಶಂಕರ್ ರಸ್ತೆವರೆಗೂ ವಿಸ್ತರಿಸಿದರೆ ಅನುಕೂಲ. ನಗರದ ಶುಚಿತ್ವ ಹಾಗೂ ಪರಿಸರ ರಕ್ಷಿಸುವ ಬಗ್ಗೆ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಫಲಕಗಳನ್ನು ಅಳವಡಿಸಬೇಕು. ನಗರದ ಸೌಂದರ್ಯ ಹೆಚ್ಚಿಸಲು ದೇವಯ್ಯ ವೃತ್ತದಿಂದ ಚೌಕ್, ಕಾಲೇಜು ರಸ್ತೆಯಿಂದ ಎಸ್‌ಬಿಐ, ಎಸ್‌ಬಿಐಯಿಂದ ಡಿಐಸಿ ಕಚೇರಿ ಅಲ್ಲಿಂದ ಮತ್ತೆ ದೇವಯ್ಯ ವೃತ್ತದವರೆಗೆ ಅಲಂಕಾರಿಕ ದೀಪವನ್ನು ಅಳವಡಿಸಬೇಕು.

ರಾಜೇಶ್: ರಾಜಾಸೀಟು ಟೋಯ್ ಟ್ರೆöÊನ್ ಅನ್ನು ಕೂಡಲೇ ಸರಿಪಡಿಸಬೇಕು.

ಆಟೋ ಚಾಲಕರ ಸಂಘ: ರಾತ್ರಿ ಸಮಯದಲ್ಲಿ ನಗರದ ಒಳಗೆ ವಾಹನಗಳು ಡಿಮ್‌ಲೈಟ್ ಬಳಸಿ ಓಡಾಡುವಂತಾಗಬೇಕು.

ಇನ್ನು ಹಲವರು ನಗರದ ಅಭಿವೃದ್ಧಿ ಬಗ್ಗೆ ತಮ್ಮ - ತಮ್ಮ ಅನಿಸಿಕೆಯನ್ನು ಹಂಚಿಕೊAಡರು.

ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರೂ ಕೂಡಾ ಹಲವು ಸಲಹೆ ಸೂಚನೆಗಳನ್ನು ಪಾಲಿಸುವಂತೆ ನಾಗರಿರಕಲ್ಲಿ ಕೇಳಿಕೊಂಡರು. ಉಪನಿರೀಕ್ಷಕಿ ಅಂತಿಮಾ ಸ್ವಾಗತಿಸಿ, ವಂದಿಸಿದರು. ವೇದಿಕೆಯಲ್ಲಿ ಸಂಚಾರಿ ಎಸ್‌ಐ ಬೆಳ್ಳಿಯಪ್ಪ ಇದ್ದರು.