*ಗೋಣಿಕೊಪ್ಪಲು, ಫೆ. ೧೬: ಹಾತೂರು ಶಾಲಾ ಮೈದಾನದಲ್ಲಿ ತಾ. ೨೬, ೨೭, ೨೮ ರಂದು ೩ ದಿನಗಳ ಕಾಲ ಕೊಂಗೇಪAಡ ಸಚಿನ್ ಮೆಮೋರಿಯಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಜಿಲ್ಲೆಯ ಪ್ರತಿಭಾನ್ವಿತ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಆಸಕ್ತ ತಂಡಗಳು ತಾ. ೨೦ ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ಕೊಂಗೇಪAಡ ಸಚಿನ್ ಮೆಮೋರಿಯಲ್ ಕ್ರಿಕೆಟ್ ಪಂದ್ಯಾಟದ ಸಂಚಾಲಕ ಪುಲಿಯಂಡ ರೋಷನ್ ಮಾಹಿತಿ ನೀಡಿದ್ದಾರೆ.
ವಿಜೇತ ತಂಡಕ್ಕೆ ೨೦ ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ೧೦ ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೪೪೯೫೩೫೩೪೨, ೯೬೧೧೩೩೨೬೮೭ ಸಂಪರ್ಕಿಸ ಬಹುದಾಗಿದೆ.