ಸುಂಟಿಕೊಪ್ಪ, ಫೆ. ೧೫: ಅಂರ್ರಾಷ್ಟಿçÃಯ ಮಟ್ಟದ ಹಾಗೂ ರಾಜ್ಯಮಟ್ಟದ ಯುವ ಕ್ರೀಡಾ ಪ್ರತಿಭೆಗಳಿಬ್ಬರು ಹಸೆಮಣೆ ಏರಿ ವಧು-ವರರಾದರು.
ಸುಂಟಿಕೊಪ್ಪ ಗದ್ದೆಹಳ್ಳದ ಕೃಷಿಕರಾದ ಪಟ್ಟೆಮನೆ ಉದಯಕುಮಾರ್ ಹಾಗೂ ಗಿರಿಜಾ ದಂಪತಿಗಳ ದ್ವಿತೀಯ ಪುತ್ರಿ ನವನೀತಾ ಅಂರ್ರಾಷ್ಟಿçÃಯ ಮಟ್ಟದಲ್ಲಿ ಬಾಸ್ಕೆಟ್ಬಾಲ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ದಕ್ಷಿಣ ಮತ್ತು ಪಶ್ಚಿಮ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಗಮಂಡಲದ ನಿವಾಸಿ ನಿವೃತ್ತ ಯೋಧ ಕುಯ್ಯಮುಡಿ ಟಿ. ಮುದ್ದಯ್ಯ ಮತ್ತು ಲಲಿತಾ ದಂಪತಿಯರ ಪುತ್ರ ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಭಾರತೀಯ ಭೂ ಸೇನೆಯ ಬೆಂಗಳೂರಿನ ರೆಜಿಮೆಂಟ್ನಲ್ಲಿ ಜೂನಿಯರ್ ಕಮೀಷನರ್ ಆಗಿರುವ ಕೆ.ಎಂ. ಆದರ್ಶ್ ಅವರನ್ನು ತಾ. ೧೪ ರಂದು ಕುಶಾಲನಗರದ ರೈತಭವನದಲ್ಲಿ ಕೊಡಗಿನ ಅರೆಗೌಡ ಜನಾಂಗದ ಸಂಪ್ರದಾಯದAತೆ ವಿವಾಹವಾದರು.
ಈ ಸಂದರ್ಭ ರಾಷ್ಟç ಹಾಗೂ ರಾಜ್ಯಮಟ್ಟದ ಕ್ರೀಡಾ ತರಬೇತುದಾರರು ಮತ್ತು ಸಹ ಕ್ರೀಡಾಪಟುಗಳು ಆಗಮಿಸಿ ನವವಧು-ವರರಿಗೆ ಶುಭ ಹಾರೈಸಿದರು