*ಸಿದ್ದಾಪುರ, ಫೆ. ೧೫ : ವಾಲ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದೆ. ಸಂಘದ ಅಧ್ಯಕ್ಷ ಎಂ.ಎA. ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಶಾಲಾ ಆವರಣದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮನುಮಹೇಶ್, ಖಜಾಂಚಿಯಾಗಿ ಕಾಶಿ ಕಾರ್ಯಪ್ಪ, ಗೌರವ ಅಧ್ಯಕ್ಷರುಗಳಾಗಿ ಎ.ವಿ. ಶಾಂತಕುಮಾರ್, ಎಂ.ಎA. ಬಿದ್ದಪ್ಪ ಹಾಗೂ ಉಪಾಧ್ಯಕ್ಷರಾಗಿ ಎಸ್.ಪಿ. ನಂದಕುಮಾರ್ ಆಯ್ಕೆಯಾದರು.

ಸಭೆಯಲ್ಲಿ ಮುಖ್ಯೋಪಾಧ್ಯಾಯ ಕುಮಾರ್, ಹಳೆಯ ವಿದ್ಯಾರ್ಥಿಗಳಾದ ಜಿ.ಎನ್. ರಾಮಪ್ಪ, ಚಂದ್ರಕಾAತ್, ಉದಯ, ಭುವನೇಂದ್ರ, ಹನೀಫ್, ಸಲೀಂ ಮತ್ತಿತರರು ಹಾಜರಿದ್ದರು.