ಮಡಿಕೇರಿ, ಫೆ.೧೫: ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಅಮೂಲ್ಯ ಕೃತಿಯನ್ನು ಕೊಡುಗೆ ನೀಡಿದ ಹಿರಿಯ ಸಾಹಿತಿ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರು ತಾ. ೧೩ ರಂದು ನಿಧನರಾದ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನೆರೆದಿದ್ದ ಭಾಷಾಭಿಮಾನಿಗಳ ಸಮ್ಮುಖದಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು. ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಮಾಜಿ ಅಧ್ಯಕ್ಷರಾದ ಬಾಚರಣಿ ಯಂಡ.ಪಿ.ಅಪ್ಪಣ್ಣ, ಡಾ.ಉಳ್ಳಿಯಡ ಎಂ.ಪೂವಯ್ಯ ಮತ್ತು ಉಳ್ಳಿಯಡ ಡಾಟಿ ಪೂವಯ್ಯ ಇತರರು ಇದ್ದರು.