ಕೂಡಿಗೆ ಫೆ ೧೫ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಆನೆಕೆರೆ ಸಮೀಪವಿರುವ ೮ ಎಕರೆಗಳಷ್ಟು ಪ್ರದೇಶದಲ್ಲಿ ಸಿ ಎನ್ ಡಿ ಲ್ಯಾಂಡ್ ಜಾಗ ಇರುವುದರಿಂದ ಸಮರ್ಪಕವಾಗಿ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ಮೂಲಕ ನಡೆಸಿ ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು. ಅವರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದ ನೂರಾರು ಗ್ರಾಮಸ್ಥರು ಅವರನ್ನು ಭೇಟಿ ಮಾಡಿ ನಿವೇಶನವನ್ನು ನೀಡುವಂತೆ ಮನವಿ ಮಾಡಿದಾಗ ಅವರು ಮನವಿಯನ್ನು ಸ್ವೀಕರಿಸಿದರು. ಅನೇಕ ವರ್ಷಗಳಿಂದಲೂ ಬಾಕಿ ಇರುವ ನಿವೇಶನ ಹಂಚಿಕೆಯ ವಿಷಯವನ್ನು ಸಂಬAಧಿಸಿದ ಅಧಿಕಾರಿ ಗಳೊಂದಿಗೆ ಚರ್ಚಿಸಿ ನಂತರ ಗ್ರಾಮ ಪಂಚಾಯ್ತಿ ವಸತಿ ರಹಿತರ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ನೀಡುವುದಾಗಿ ಭರವಸೆ ನೀಡಿದರು.

ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೆ ನಂಬರ್ ೨೫ ರಲ್ಲಿ ೮ ಎಕರೆ ಮತ್ತು ೧/೧ ರಲ್ಲಿ ೫ ಎಕರೆಗಳಷ್ಟು ಪ್ರದೇಶವಿದ್ದು ನಿಯಮಾನುಸಾರವಾಗಿ ವಿತರಣೆಯನ್ನು ಮಾಡಲಾಗುವುದು. ಅಲ್ಲದೆ ಈ ಜಾಗಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯನ್ನು ಗ್ರಾಮ ಪಂಚಾಯತಿ ಮೂಲಕ ನಡೆಸಲಾಗುವುದು ಮುಂದಿನ ದಿನಗಳಲ್ಲಿ ಸರಕಾರದಿಂದ ಬಿಡುಗಡೆ ಆಗಲಿರುವ ಮನೆಗಳನ್ನು ಎಲ್ಲಾ ವರ್ಗದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದರು. ಕೂಡು ಮಂಗಳೂರು ಬೂತ್ ಸಮಿತಿಯ ಅಧ್ಯಕ್ಷ ಮಂಜುನಾಥ, ಪ್ರವೀಣ್, ತಾಲ್ಲೂಕು ಪಂಚಾಯತ್ ಸದಸ್ಯ ಗಣೇಶ್, ಪಕ್ಷದ ಪ್ರಮುಖರಾದ ಪ್ರಶಾಂತ್, ರವಿ, ಕುಮಾರ್, ಸ್ವಾಮಿ, ಕೂಡಿಗೆ ಕೊಡವ ಕೂಟದ ಅಧ್ಯಕ್ಷ ವಾಂಚಿರ ಮನು ನಂಜುAಡ ಸೇರಿದಂತೆ ಅನೇಕ ಮಂದಿ ಹಾಜರಿದ್ದರು

ನಿವೇಶನ ನೀಡುವ ಭರವಸೆಸೇರಿದಂತೆ ಅನೇಕ ಮಂದಿ ಹಾಜರಿದ್ದರು