ಮೂರ್ನಾಡು, ಫೆ. ೧೫: ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್ ಶಿಪ್ ಅಸೋಸಿಯೇಷನ್ ವತಿಯಿಂದ ತಾ. ೧೪ ರಂದು ನಡೆದ ಮೈಸೂರು ಜಿಲ್ಲಾ ಮಟ್ಟದ ಓಪನ್ ಚಾಂಪಿಯನ್ ಶಿಪ್ ನೃತ್ಯ ಸ್ಪರ್ಧೆಯಲ್ಲಿ ಕೊಡಗಿನ ಅಮ್ಮತ್ತಿಯ ನಾಟ್ಯಾಂಜಲಿ ಸಂಗೀತ ಮತ್ತು ನೃತ್ಯ ಸಂಸ್ಥೆಯ ವೀರಾಜಪೇಟೆ, ಮೂರ್ನಾಡು, ಗೋಣಿಕೊಪ್ಪ ಶಾಖೆಯ ವಿದ್ಯಾರ್ಥಿಗಳು ೩೦ ಚಿನ್ನ, ೨ ಬೆಳ್ಳಿ, ೧ ಕಂಚಿನ ಪದಕಗಳನ್ನು ಪಡೆದು ವಿನ್ನರ್ ಅಪ್ ಚಾಂಪಿಯನ್ ಟ್ರೋಫಿ ಹಾಗೂ ರೂ. ೧೫ ಸಾವಿರ ನಗದು ಬಹುಮಾನ ಪಡೆಯುವುದರ ಮತ್ತು ನೃತ್ಯ ಸಂಸ್ಥೆಯ ವೀರಾಜಪೇಟೆ, ಮೂರ್ನಾಡು, ಗೋಣಿಕೊಪ್ಪ ಶಾಖೆಯ ವಿದ್ಯಾರ್ಥಿಗಳು ೩೦ ಚಿನ್ನ, ೨ ಬೆಳ್ಳಿ, ೧ ಕಂಚಿನ ಪದಕಗಳನ್ನು ಪಡೆದು ವಿನ್ನರ್ ಅಪ್ ಚಾಂಪಿಯನ್ ಟ್ರೋಫಿ ಹಾಗೂ ರೂ. ೧೫ ಸಾವಿರ ನಗದು ಬಹುಮಾನ ಪಡೆಯುವುದರ ಮೂಲಕ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ನಾಟ್ಯಾಂಜಲಿ ನೃತ್ಯ ಸಂಸ್ಥೆಯ ನಿರ್ದೇಶಕಿ ಹೇಮಾವತಿ ಕಾಂತ್ ರಾಜ್, ಹಾಗೂ ತರಬೇತಿದಾರರಾದ ಕಾವ್ಯಶ್ರೀ ಮತ್ತು ಶ್ವೇತಾ ಇವರುಗಳ ಮಾರ್ಗದರ್ಶನ ದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.