ನಾಪೋಕ್ಲು, ಫೆ. ೧೫: ಮಡಿಕೇರಿಯಿಂದ ಪುತ್ತೂರು ಕಡೆಗೆ ಪ್ರಯಾಣಿಸು ವವರಿಗೆ ಮದೆನಾಡು ಸಮೀಪದ ದೇವರಕೊಲ್ಲಿಯಲ್ಲಿ ದೈವ ಸನ್ನಿಧಿಯೊಂದು ಗಮನ ಸೆಳೆಯುತ್ತದೆ. ಇದು, ಪೌರಾಣಿಕ ಹಿನ್ನೆಲೆಯಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಿ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲೇ ಪ್ರಯಾಣಿಕ ರನ್ನು ಆಕರ್ಷಿಸುತ್ತಿದೆ ಈ ಸನ್ನಿಧಿ. ಹೆಚ್ಚಿನವರು ಇಲ್ಲೊಂದು ಘಳಿಗೆ ವಾಹನದಿಂದ ಇಳಿದು ಶ್ರೀದೇವಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕವಷ್ಟೇ ಮುಂದುವರಿಯುತ್ತಾರೆ.

ಇದಿಷ್ಟೇ ಅಲ್ಲ. ಈ ಕ್ಷೇತ್ರದ ಮತ್ತೊಂದು ಮಹಿಮೆಯೆಂದರೆ, ಮತ್ಸö್ಯಗುಂಡಿ. ರಸ್ತೆಯ ಇನ್ನೊಂದು ಮಗ್ಗುಲಲ್ಲಿರುವ ಪಯಸ್ವಿನಿ ತೊರೆಯಲ್ಲಿ ಸಾವಿರಾರು ಮೀನುಗಳಿವೆ. ಈ ಬಾರಿ ಆಶ್ಚರ್ಯಕರವೆಂಬAತೆ, ಅಪಾರ ಸಂಖ್ಯೆಯ ಮೀನುಗಳು ಮತ್ಸö್ಯಗುಂಡಿಯಲ್ಲಿ ಪ್ರತ್ಯಕ್ಷವಾಗಿವೆ. ಮೀನುಗಳನ್ನು ನೋಡಲೆಂದೇ ಜನರು ಮತ್ಸö್ಯಗುಂಡಿಗೆ ಲಗ್ಗೆ ಹಾಕುತ್ತಾರೆ. ಈ ಕಾರಣದಿಂದ, ಶ್ರೀ ಚಾಮುಂಡೇಶ್ವರಿ ಸನ್ನಿಧಿ ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಾಗಿ ಬದಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿದ್ದ ಈ ಕ್ಷೇತ್ರವು, ಇದೀಗ ಊರಿನವರು ಮತ್ತು ಆಡಳಿತ ಮಂಡಳಿಯ ಶ್ರಮದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ. ರಸ್ತೆ ಪರಿಧಿಯಿಂದ ಸ್ವಲ್ಪ ಹಿಂದಕ್ಕೆ ಹೊಸ ದೇವಸ್ಥಾನ ನಿರ್ಮಾಣ ವಾಗುತ್ತಿದೆ. ದೇವಸ್ಥಾನಕ್ಕೆ ಸುಮಾರು ೧೮೦೦ ವರ್ಷಗಳಿಗೂ ಹಿಂದಿನ ಇತಿಹಾಸ ಇದೆ ಎನ್ನಲಾಗಿದೆ. ಸನ್ನಿಧಿ ಪಕ್ಕ ದಲ್ಲೇ ಭಾರೀ ಸಂಪಿಗೆ ಮರವಿತ್ತು. ಹಿಂದೆ, ಋಷಿಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಾ, ಶ್ರೀದೇವಿಯನ್ನು ಆರಾಧಿಸುತ್ತಿದ್ದ ರಂತೆ. ಕ್ರಮೇಣ ಸ್ಥಳೀಯ ಕುಡಿಯ ಸಮುದಾಯವು ಪೂಜೆ ಪುನಸ್ಕಾರಗಳನ್ನು ಮುಂದುವರಿಸುತ್ತಾ ಬಂದಿದೆ. ಇಂದು, ದೇವಾಲಯದ ಉಸ್ತುವಾರಿಗಾಗಿ ಸಾರ್ವಜನಿಕ ಸಮಿತಿಯನ್ನು ರಚಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಮುನ್ನಡಿ ಇಡಲಾಗಿದೆ. ಹಿಂದೆ, ದೈವಜ್ಞ ಬಾಲಕೃಷ್ಣ ಕಲ್ಲಾರೆ ಅವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ, ಶಿಲಾಮಯ ಗರ್ಭಗುಡಿ ನಿರ್ಮಿಸಬೇಕೆಂಬ ಸಲಹೆ ಕೇಳಿಬಂದಿದೆ. ಶಾಸ್ತಾವು ಮತ್ತು ವೀರಭದ್ರಕಟ್ಟೆ, ಮಹಾದ್ವಾರ, ತಡೆಗೋಡೆ ಇತ್ಯಾದಿ ಕಾರ್ಯಗಳಿಗೆ ಸಮಿತಿಯು ಸುಮಾರು ರೂ. ೯೭.೫೫ ಲಕ್ಷದ ಯೋಜನೆ ರೂಪಿಸಿದೆ. ದಾನಿಗಳ ನೆರವನ್ನು ನಿರೀಕ್ಷಿಸಲಾಗುತ್ತಿದೆ ಎಂದು, ಆಡಳಿತ ಮಂಡಳಿ ಅಧ್ಯಕ್ಷ ಕುಂಞÂರಾಮ ಹೇಳುತ್ತಾರೆ. ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶ್ರೀ ಚಾಮುಂಡೇಶ್ವರಿ ಸೇರಿದಂತೆ, ಶಾಸ್ತಾವು, ವೀರಭದ್ರಗುಡಿ ಹಾಗೂ ಗುಳಿಗನ ನೆಲೆಯಿದೆ. ಕೊಡಗು ಜಿಲ್ಲೆಗೆ ಆಗಮಿಸುವ ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ತೆರಳುವ ಸದ್ಭಕ್ತರು, ಶ್ರೀ ಚಾಮುಂಡಿಯನ್ನು ಸ್ಮರಿಸಿ, ಪ್ರಾರ್ಥನೆ ಸಲ್ಲಿಸಿಯೇ ಪ್ರಯಾಣ ಮುಂದುವರಿಸುತ್ತಾರೆ. ದೇವಿಯು ಭಕ್ತರ ಬಯಕೆಗಳನ್ನು ಈಡೇರಿಸಿ ಸಲಹಿದ ಉದಾಹರಣೆಗಳೂ ಇವೆ ಎನ್ನುತ್ತಾರೆ ಕುಂಞÂರಾಮ. ದಾನಿಗಳ ನೆರವಿಗಾಗಿ ಆಡಳಿತ ಮಂಡಳಿಯ ಮೊ-೯೧೦೮೧೨೩೭೫೪ ಮತ್ತು ೯೪೮೧೭೬೧೨೯೧.