ಮಡಿಕೇರಿ ಫೆ. ೧೫ : ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಡಾಂಬರೀಕರಣಗೊAಡಿದೆ, ಆದರೆ ಮೂರು ವಾರ್ಡ್ಗಳನ್ನು ಒಳಗೊಂಡಿರುವ ದೇಚೂರು ರಸ್ತೆಯನ್ನು ನಗರಸಭೆ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೂನಿಯರ್ ಕಾಲೇಜು ರಸ್ತೆಯಿಂದ ದೇಚೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಅಶ್ವಥಕಟ್ಟೆ ಎದುರಿನ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿAದ ಕೂಡಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳ ಹಿಂದೆ ತರಾತುರಿಯಲ್ಲಿ ದೇಚೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡಿ ರುವ ನಗರಸಭೆ ಪಕ್ಕದಲ್ಲೇ ಇರುವ ರಸ್ತೆಗಳನ್ನು ನಿರ್ಲಕ್ಷಿಸಿದೆ. ಗುಂಡಿಗಳಲ್ಲಿ ರಸ್ತೆಯನ್ನು ಹುಡುಕಬೇಕಾದ ದುಸ್ಥಿತಿ ಇಲ್ಲಿದ್ದು, ಈ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇದೆ.

ತುರ್ತು ಪರಿಸ್ಥಿತಿಗಳಲ್ಲಿ ಆಟೋರಿಕ್ಷಾಗಳು ಕೂಡ ಬಾರದ ಪರಿಸ್ಥಿತಿ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಈಗಾಗಲೇ ರಸ್ತೆ ಅವ್ಯವಸ್ಥೆ ಬಗ್ಗೆ ಪೌರಾಯುಕ್ತರ ಗಮನ ಸೆಳೆಯಲಾಗಿದ್ದು, ಅವರು ಡಾಂಬರೀಕರಣದ ಭರವಸೆ ನೀಡಿದ್ದಾರೆ.