ತೂಚಮಕೇರಿಯ ಕೊಮ್ಮಾಡು ಅಶ್ವರೂಢಾ ಬೆಟ್ಟಚಿಕ್ಕಿ ದೇವರ ನವೀಕೃತ ದೇವಾಲಯದ ಪುನರ್ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ತಾ. ೧೬ (ಇಂದು) ಮತ್ತು ತಾ. ೧೭ ರಂದು ನಾಳೆ ನಡೆಯಲಿದೆ.
ಪೊನ್ನಂಪೇಟೆಯ ರಾಜೇಶ್ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾ. ೧೬ರಂದು ಬೆಳಿಗ್ಗೆ ಆಚಾರ್ಯವರ್ಣ ಗೋಪೂಜೆ, ಪಂಚಗವ್ಯ ಗಣಹೋಮ, ಮಹಾಸುದರ್ಶನ ಹೋಮ, ಅನ್ನಸಂತರ್ಪಣೆ ನಡೆಯಲಿದೆ.
ತಾ. ೧೭ರಂದು ಗಣಹೋಮ, ಅಂಕುರಪೂಜೆ, ಮಹಾಪೂಜೆ, ಮಂತ್ರಾಕ್ಷತೆ, ಕಲಶಾಭಿಷೇಕ ಮುಂತಾದ ದೇವತಾ ಕಾರ್ಯಗಳು ನಡೆಯಲಿವೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.