ಮಡಿಕೇರಿ: ಜಿಲ್ಲೆಯಲ್ಲಿ ತಾ.೧೫ ರಂದು ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗದೆ ಇದ್ದದ್ದು, ಸುಮಾರು ೮ ತಿಂಗಳುಗಳ ಕಾಲ ಪ್ರತೀದಿನ ಕನಿಷ್ಟ ಒಂದಾದರೂ ಎಂಬAತೆ ವರದಿಯಾಗುತ್ತಿದ್ದ ಕೊರೊನಾ ಪ್ರಕರಣಗಳಿಗೆ ಅಲ್ಪವಿರಾಮ ದೊರೆತಂತಾಗಿದೆ. ೨೦೨೦ ರ ಮಾರ್ಚ್ ೧೯ ರಂದು ಕೊಂಡAಗೇರಿಯ ನಿವಾಸಿಗೆ ಕೊರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ವರದಿಯಾದ ಮೊದಲ ಪ್ರಕರಣವಾಯಿತು. ನಂತರ ಏಪ್ರಿಲ್ನಲ್ಲಿ ೨ ಹಾಗೂ ಮೇ ತಿಂಗಳಲ್ಲಿ ಕೆಲವು ಪ್ರಕರಣಗಳು ವರದಿಯಾಯಿತು. ಜೂನ್ ತಿಂಗಳ ೨೪ನೇ ತಾರೀಕು ಜಿಲ್ಲಾಸ್ಪತ್ರೆಯ ೪ ವೈದ್ಯರು ಸೇರಿದಂತೆ ಒಟ್ಟು ೧೪ ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಜಿಲ್ಲೆಯ ಜನತೆಗೆ ಭಯದ ವಾತಾವರಣ ಸೃಷ್ಟಿಸಿತು. ಇದಾದ ಬಳಿಕ ಪ್ರತೀ ದಿನ ಕೆಲವು ಪ್ರಕರಣಗಳು ವರದಿಯಾಗುತ್ತಾ ಬರುತ್ತಿದ್ದು, ಒಂದೇ ದಿನದಲ್ಲಿ, ಕೊರೊನಾ ಪ್ರಕರಣಗಳು ೫೦ ಹಾಗೂ ೧೦೦ರ ಗಡಿ ದಾಟಿದ ಉದಾಹರಣೆಗಳು ಇವೆ. ೨೦೨೦ ರ ಅಕ್ಟೋಬರ್ ೨೦ ರ ನಂತರ ದಿನಕ್ಕೆ ಸರಾಸರಿ ೨೦ ರಂತೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಾ ಬಂದಿದ್ದು, ಕೆಲವೊಮ್ಮೆ ಒಂದAಕಿ ಕೂಡ ದಾಟುತ್ತಿರಲಿಲ್ಲ. ಇದೀಗ ಮೂರು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಬಹಳ ಕಡಿಮೆಯಿದ್ದು,
(ಮೊದಲ ಪುಟದಿಂದ) ತಾ.೧೨ರಂದು ೧ ಪ್ರಕರಣ, ತಾ.೧೩ ರಂದು ೫, ತಾ.೧೪ ರಂದು ೨ ಪ್ರಕರಣ ಹಾಗೂ ತಾ.೧೫ ರಂದು ಯಾವುದೇ ಪ್ರಕರಣಗಳು ವರದಿಯಾಗದೆ ಇರುವುದು ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಇದುವರೆಗೆ ಒಟ್ಟು ೬,೧೪೪ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದು, ೬೦೧೯ ಮಂದಿ ಗುಣಮುಖರಾಗಿದ್ದಾರೆ. ಒಟ್ಟು ೮೧ ಮಂದಿ ಸಾವನ್ನಪ್ಪಿದ್ದು ೪೪ ಪ್ರಕರಣಗಳು ಸಕ್ರಿಯವಾಗಿವೆ.