ಮಡಿಕೇರಿ, ಫೆ. ೧೫: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ನ ವತಿಯಿಂದ ಇದೇ ಪ್ರಥಮ ಬಾರಿಗೆ ಕೊಯಿಮೆ-೨೦೨೧, ಕೊಡವ ಸಾಂಸ್ಕೃತಿಕ ಮತ್ತು ಕಲಿಕಾ ಮಹೋತ್ಸವವನ್ನು ಮಾರ್ಚ್ ೬ ಮತ್ತು ೭ ರಂದು ಚಿಕ್ಕಮಂಡೂರಿನ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ಕುರಿತು ಟ್ರಸ್ಟ್ನ ಪ್ರಮುಖರು ಮಾಹಿತಿ ನೀಡಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯ ಕೊಡವ ಸಮುದಾಯದವರು ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಉದ್ಯೋಗ, ಉದ್ಯಮ, ವಿದ್ಯಾಭ್ಯಾಸ ಹೀಗೆ ನಾನಾ ಕಾರಣಗಳಿಂದ ನೆಲೆಯಾಗಿದ್ದಾರೆ. ಕೊಡವ ಕೌಟುಂಬಿಕ ಹಾಕಿ ಉತ್ಸವದ ನೆಪದಲ್ಲಿ ಇದುವರೆಗೂ ತಮ್ಮ ತಾಯ್ನಾಡಿನಲ್ಲಿ, ತಮ್ಮ ಕುಟುಂಬ, ಬಂಧು ಬಳಗದೊಂದಿಗೆ ಬಂದು ಬೆರೆತು ಪ್ರೀತಿ, ಅನ್ಯೋನ್ಯತೆಯಿಂದ, ಪಾಲ್ಗೊಳ್ಳುತ್ತಿದ್ದರು. ಕಳೆದೆರಡು ವರ್ಷದಿಂದ ಅನಿವಾರ್ಯ ಕಾರಣಗಳಿಂದಾಗಿ ಹಾಕಿ ಕ್ರೀಡಾ ಹಬ್ಬ ನಿಂತಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ನಮ್ಮ ಜನರನ್ನು ಒಗ್ಗೂಡಿಸುವ ಸಲುವಾಗಿ, ವರುಷಕ್ಕೊಮ್ಮೆ ಜನಾಂಗ ಬಾಂಧವರ ನಡುವೆ ನಿಕಟ ಭಾಂದವ್ಯವನ್ನು ಬಲಗೊಳಿಸುವುದನ್ನು ಮುಂದುವರೆಸುತ್ತಾ ಹೋಗುವ ಉದ್ದೇಶದಿಂದ ಈ ಕೊಡವ ಸಾಂಸ್ಕೃತಿಕ, ಕಲಿಕಾ ಹಬ್ಬವನ್ನು ಆಯೋಜಿಸಲಾಗುವುದು. ನಮ್ಮಲ್ಲಿನ ವಿಶೇಷ ಪಾಂಡಿತ್ಯವಿರುವ ಕಲಾವಿದರು, ತೆರೆಮರೆಯ ಉದಯೋನ್ಮುಖ ಆಟ್, ಪಾಟ್, ಸಾಹಿತ್ಯ, ಕ್ರೀಡಾ ಕ್ಷೇತ್ರ, ಹೀಗೆ ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಕಲ್ಪಿಸುವ, ಕೊಡವಾಮೆಯ ಸಾರವನ್ನು ಕಲಿಯುವ ಕಲಿಸುವ, ಉಳಿಸುವ, ಬೆಳೆಸುವ, ಪೋಷಿಸುವ ನಿಟ್ಟಿನಲ್ಲಿ ಈ ಕೊಯಿವೆ ಕಾರ್ಯಕ್ರಮ ಹಬ್ಬವಾಗಿ ಮೂಡಿ ಬರಲಿದೆ.
ಈ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯತ್ನ ಹಾಗೂ ವಿಭಿನ್ನವಾಗಿಯೇ ನಡೆಸುವ ಚಿಂತನೆ ನಮ್ಮದು ಎಂದು ಅವರು ತಿಳಿಸಿದ್ದಾರೆ.
ಪ್ರತಿನಿಧಿಗಳಾಗಿ ಎಲ್ಲರಿಗೂ ಅವಕಾಶ
ಇದು ವಿಶ್ವದಾದ್ಯಂತ ಇರುವ ಎಲ್ಲಾ ಕೊಡವರಿಗಾಗಿ ಎಂದೇ ಆಚರಿಸಲಾಗುವ ಹಬ್ಬವಾಗಿದೆ. ಯಾವುದೇ ಕೊಡವ ಸಮಾಜ, ಕೊಡವ ಕೇರಿ, ಸಂಘ, ಸಂಸ್ಥೆ, ಒಕ್ಕೂಟ, ಊರು, ಕುಟುಂಬ, ಹೀಗೆ ತಂಡ ರಚನೆ ಮಾಡಿ ಪ್ರತಿನಿದಿಗಳಾಗಿ ಭಾಗವಹಿಸಲು ಅವಕಾಶವಿದೆ. ಒಂದು ತಂಡದ ಹೆಸರಿನಲ್ಲಿ ಒಮ್ಮೆ ಮಾತ್ರ ಭಾಗವಹಿಸಲು ಅವಕಾಶ ಮಾಡಲಾಗಿದೆ. (ಉದಾ:ಎ ತಂಡ ಬಿ ತಂಡ ಹೀಗೆ ಅವಕಾಶ ಇಲ್ಲ)
ಯಾವುದಾದರೂ ಒಂದು ತಂಡವನ್ನು ಪ್ರತಿನಿಧಿಸಿ ಭಾಗವಹಿಸುವ ಅವಕಾಶವಿದೆ. ಆದರೆ ಇಂತಿಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ನಿರ್ಬಂಧವಿಲ್ಲ. ಹಾಗೆಯೇ ವೈಯಕ್ತಿಕ ವಿಭಾಗಗಳಲ್ಲಿ ತಂಡದ ಹೊರತಾಗಿಯೂ ಆಸಕ್ತರು ಭಾಗವಹಿಸಬಹುದಾಗಿದೆ.
ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸಿ ಅಧಿಕ ಅಂಕಗಳನ್ನು ಗಳಿಸುವ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಘೋಷಿಸಲಾಗುವುದು.
ಪಡಿಪು ಕಯ್ಯಾಲೆ (ಐeಚಿಡಿಟಿiಟಿg hub) ಎನ್ನುವ ಕಲಿಕಾ ಕೇಂದ್ರದಲ್ಲಿ ನಮ್ಮ ಸಂಸ್ಕೃತಿ, ಸಾಹಿತ್ಯ, ಆಚಾರ ವಿಚಾರ, ಪದ್ಧತಿ ಪರಂಪರೆಯನ್ನು ಮೆಲುಕು ಹಾಕುತ್ತಾ ಮುಂದಿನ ತಲೆಮಾರಿನವರಿಗೆ ನಮ್ಮ ವಿಶೇಷ ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುವುದು.
ತಲತಲಾಂತರದಿAದ ಕೊಡವ ಪೂರ್ವಜರು ಉಪಯೋಗಿಸುತ್ತಿದ್ದ ಕೃಷಿ, ಕಲೆ, ಪರಿಕರಗಳು, ದಿನಬಳಕೆಯ ವಸ್ತುಗಳ ಸಂಗ್ರಹವನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.
ಮಾರಾಟ ಕೇಂದ್ರದಲ್ಲಿ ಸಾಂಸ್ಕೃತಿಕ ಮತ್ತು ಕಲಿಕಾ ಹಬ್ಬದ ಪ್ರಯುಕ್ತ ವಿವಿಧ ಬಗೆಯ ತಿಂಡಿ ತಿನಿಸು, ದಿನಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೊಡವ ಉಡುಪಿನ ವೈಶಿಷ್ಟ್ಯತೆಗಳಾದ ಪಾನಿ ಮಂಡೆತುಣಿ, ನೀಲಿ ಮತ್ತು ಕೆಂಪು ಬಣ್ಣದ ಚೇಲೆಗಳನ್ನು ಕನೆಕ್ಟಿಂಗ್ ಕೊಡವಾಸ್‌ನ ಪ್ರತ್ಯೇಕ ಮಾರಾಟ ಮಳಿಗೆಯಲ್ಲಿ ಇರಿಸಲಾಗುತ್ತದೆ.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕೊಡವರ ಧಾರ್ಮಿಕ ಮತ್ತು ಸಂಸ್ಕೃತಿಯ ಧ್ಯೋತಕವಾದ ಬಹುಮಾನಗಳನ್ನು ನೀಡಲಾಗುವುದು. ಮಹಿಳೆಯರು, ಪುರುಷರು, ಮಕ್ಕಳು ಹೀಗೆ ಎಲ್ಲರೂ ಬೇರೆ ಬೇರೆ ವಿಭಾಗಗಳ ಸ್ಪಧೆೆðಯಲ್ಲಿ ಭಾಗವಹಿಸಲು ಅವಕಾಶವಿದೆ.
ಸ್ಪರ್ಧೆಗಳ ವಿವರ
ಮಹಿಳೆಯರ ವಿಭಾಗ : ಉಮ್ಮತ್ತಾಟ್ (೧೨ಜನ+ ೨ ಹಾಡುವವರು, ೮ ನಿಮಿಷದ ಒಳಗೆ), ಆಶು ನಟನೆ-ಆಂಜೆಡ್‌ತ್ ನಟನೆ (Piಛಿಞ ಚಿಟಿಜ ಚಿಛಿಣ), ಕೊಡವ ತಿನಿಸು (೩ ಕೊಡವ ಪುಟ್ಟ್' ಇರಬೇಕು), ಗುಂಪು ನೃತ್ಯ-ಕೂಟ್ ಆಟ್ (ಕೊಡವ ಹಾಡಿಗೆ) (೮ - ೧೨ ಜನ, ೫ ನಿಮಿಷ).
ಆಮಕ್ಕಡ ವಿಭಾಗ : ಬೊಳ್‌ಕಾಟ್ (೧೨ ಜನ+ ೪ ಹಾಡುಗಾರರು, ೬ ನಿಮಿಷ), ಕೋಲಾಟ್ (೧೨ ಜನ+ ೪ ಹಾಡುಗಾರರು, ೬ ನಿಮಿಷ), ಬಾಳೊಪಾಟ್ (೪ ಜನ, ೮ ನಿಮಿಷ), ಕತ್ತಿಯಾಟ್ (೧೨ ಜನ+ ೪ ಹಾಡುಗಾರರು, ೬ ನಿಮಿಷ), ಪರೆಯಕಳಿ (೨ ಜನ, ೩ ನಿಮಿಷ), ತಾಲಿಪಾಟ್ (೪ ಜನ, ೮ ನಿಮಿಷ), ಸಮ್ಮಂಧ ಅಡ್‌ಕೊ (೮ ನಿಮಿಷ), ಕಪ್ಪೆ ಆಟ್ (ಮಕ್ಕಳ ವಿಭಾಗ)
ಪುರುಷ ಮತ್ತು ಮಹಿಳೆಯರಿಗೆ : ಕೊಡವ ಹಾಡು (ಸ್ವರ್ಗೀಯ ಕೊಡವ ಸಾಹಿತಿಗಳ ರಚನೆ. (೩ ನಿಮಿಷ), ಪ್ರಾಚೀನ ವಸ್ತು ಸಂಗ್ರಹ (ಕೊಡವಾಮೆಗೆ ಸಂಬAಧ ಪಟ್ಟಂತೆ), ವಾಲಗತ್ತಾಟ್, ಕಥೆ ಹೇಳುವುದು -(೮ ನಿಮಿಷ) ಸ್ವಂತ ರಚನೆ, ವೀರ ಶೂರರ ಕತೆ, ಮಕ್ಕಳ ಕಥೆ, ಕಾಲ್ಪನಿಕ ಕಥೆ, ಹಳೆಯ ಕಾಲದ ಸಾಂಸ್ಕೃತಿಕ ವೈಭವಕ್ಕೆ ಸಂಬAಧಪಟ್ಟ ಫೋಟೊ- ವ್ಯಕ್ತಿ, ವಸ್ತು, ಘಟನೆಗೆ ಸಂಬAಧಪಟ್ಟAತೆ, ತೆಂಗಿನ ಕಾಯಿ ಎಸೆತ, ಬಿಲ್ಲು ಬಾಣ (ಅಂಬು ಬಿಲ್ಲ್), ಆಶು ಭಾಷಣ (ಠಿiಛಿಞ ಟಿ sಠಿeಚಿಞ - (೫ ನಿಮಿಷ), ಪ್ರಬಂಧ (ನಿಂತು ಹೋಗಿರುವ ಕೊಡವರ ಮೂಲ ಪದ್ಧತಿ.), ಚೋದ್- ಚೋದ್ಯ- ರಸಪ್ರಶ್ನೆ (ಇಬ್ಬರ ಒಂದು ತಂಡ), ಒs & ಒಡಿ ಕೊಯಿಮೆ ೨೦೨೧ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಮಾತ್ರ ಭಾಗವಹಿಸಲು ಅವಕಾಶ.
ಈ ಕೆಳಗಿನ ವಿಭಾಗಗಳಲ್ಲಿ ಮಕ್ಕಳ ವಿಭಾಗದ ಬೋಜಿ ಕುಞÉ ಕ್‌ಣ್ಣ (೧೬ ವಯಸ್ಸಿನ ಕೆಳಗಿರುವವರು), ಬೋಜಿ ಕುಞÉ ಮೂಡಿ (೧೬ ವಯಸ್ಸಿನ ಕೆಳಗಿರುವವರು), ಮಿಸ್ಟರ್ ಕೊಯಿಮೆ (ಚಾಯಿಕಾರ ಬಂಬ), ಮಿಸ್ಟರ್ ಕೊಯಿಮೆ (ಚಾಯಿಕರ್ತಿ ಕನ್ನಿ), ಆದರ್ಶ ದಂಪತಿ (ಕೊದಿರ ವಡಿಯ ಪೊಣ್ಣ್ ೬೦ ವಯಸ್ಸಿನ ಕೆಳಗಿನವರು), ಆದರ್ಶ ದಂಪತಿ -ವಯಸ್ಕರ ವಿಭಾಗ (೬೦ ವಯಸ್ಸಿನ ಮೇಲ್ಪಟ್ಟವರು)
ಚಿತ್ರ ಕುರಿಪೊ ಪೈಪೋಟಿ (ಚಿತ್ರ ಬಿಡಿಸುವುದು): ಕೊಡವಾಮೆಗೆ ಸಂಬAಧಪಟ್ಟ ವಿಚಾರದಲ್ಲಿ (ಉದಾ: ಐನ್ ಆರೋಡ, ಮಂದ್ ಮಾನಿ, ಪ್ರಕೃತಿ, ಉಡ್‌ಪು), ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ.
ತಂಡಗಳ ಹೆಸರು ದಾಖಲಾತಿಗೆ ಕೊನೆಯ ದಿನಾಂಕ- ಫೆÉಬ್ರವರಿ ೨೦.
ಹೆಚ್ಚಿನ ವಿವರಕ್ಕೆ ೯೯೦೨೫೮೨೨೩೦- ಚೋಕಂಡ ಸೂರಜ್ ಸೋಮಯ್ಯ, ೯೬೧೧೫೦೬೩೧೯-ನಿರನ್ ನಾಚಪ್ಪ ಶಾಂತೆಯAಡ, ೯೯೪೫೯೯೯೩೬೬- ಚೇಂದAಡ ಶಮ್ಮಿ ಮಾದಯ್ಯ ಇವರುಗಳನ್ನು ಸಂಪರ್ಕಿಸಬಹುದಾಗಿದೆ.