ಕಡಂಗ, ಫೆ. ೧೫: ಜಿಲ್ಲೆಯ ವಿದ್ಯಾಸಂಸ್ಥೆ ಅನ್ವಾರುಲ್ ಹುದಾ ವತಿಯಿಂದ ಎಸ್.ಎಸ್.ಎಫ್.ಗೆ ನೂತನವಾಗಿ ಆಯ್ಕೆಯಾದ ನಾಯಕರನ್ನು ಸನ್ಮಾನಿಸಲಾಯಿತು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಸಂಸ್ಥೆಯ ಪ್ರಧಾನ ಮುದರ್ರಿಸ್ ಶೈಖುನಾ ಇಸ್ಮಾಯಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಸ್ಥೆಯ ಪ್ರಾಂಶುಪಾಲ ಮೌಲಾನಾ ಅಬ್ದುರ್ರಶೀದ್ ಸಅದಿ ಉಸ್ತಾದರು ಪ್ರಾರ್ಥನೆ ನಡೆಸಿದರು. ಎಸ್.ಎಸ್.ಎಫ್. ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶಾಫಿ ಸಅದಿ ಸೋಮವಾರಪೇಟೆ ,ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮುಜೀಬ್ ಕೊಂಡAಗೇರಿ ಮತ್ತು ಕೋಶಾಧಿಕಾರಿಯಾಗಿ ಆಯ್ಕೆಯಾದ ರಹೀಂ ಹೊಸತೋಟ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಅಶ್ರಫ್ ಅಹ್ಸನಿ ಉಸ್ತಾದ್ ಸಮಾಜದಲ್ಲಿ ಸಂಘಟನೆಯ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ನೂತನ ಅಧ್ಯಕ್ಷ ಶಾಫಿ ಸಅದಿ ಭಾರತ ಸಂವಿಧಾನದ ಪ್ರಸ್ತುತ ಸವಾಲುಗಳನ್ನು ವಿವರಿಸಿದರು. ವೇದಿಕೆಯಲ್ಲಿ ಶಫೀಖ್ ಸಖಾಫಿ, ಅಬ್ದುರ್ರಹ್ಮಾನ್ ಅಹ್ಸನಿ, ಝೈನುದ್ದೀನ್ ಅಝ್ಹರಿ ಖಮರುದ್ದೀನ್ ಅನ್ವಾರಿ, ಶಾಫೀ ಅನ್ವಾರಿ, ಇಬ್ರಾಹಿಂ ಮಾಸ್ಟರ್ ಉಪಸ್ಥಿತರಿದ್ದರು. ಶರೀಫ್ ಎ.ಪಿ ಸ್ವಾಗತಿಸಿ, ಇಸ್ಮಾಯಿಲ್ ಹೊಸತೋಟ ವಂದಿಸಿದರು.