ಸುಂಟಿಕೊಪ್ಪ, ಫೆ. ೧೨: ಸುಂಟಿಕೊಪ್ಪದ ತರಕಾರಿ ಅಂಗಡಿಯಲ್ಲಿ ಅಪರೂಪದ ೪೬.೫ ಕೆ.ಜಿ. ತೂಕದ ಸುವರ್ಣಗೆಡ್ಡೆ ಸರ್ವರನ್ನು ಆಕರ್ಷಿಸಿದೆ.

ಇಲ್ಲಿನ ಮುಖ್ಯರಸ್ತೆ ಯಲ್ಲಿರುವ ತರಕಾರಿ ಅಂಗಡಿಯಲ್ಲಿ ಗ್ರಾಮಾಂತರ ಪ್ರದೇಶದಿಂದ ಸುವರ್ಣಗೆಡ್ಡೆ ಬಂದಿದ್ದು, ಸದರಿ ಅಂಗಡಿಯ ಮಾಲೀಕ ಇರ್ಷಾದ್ ಅವರು ತೂಕ ಮಾಡಿದಾಗ ೪೬ ಕೆ.ಜಿ. ೫೦೦ ಗ್ರಾಂ ಇದ್ದು, ಅಚ್ಚರಿ ಮೂಡಿಸಿದೆ.