ಶ್ರೀಮಂಗಲ, ಫೆ. ೧೨: ದಕ್ಷಿಣ ಭಾರತದ ಏಕೈಕ ಐತಿಹಾಸಿಕ ಹಿನ್ನೆಲೆಯುಳ್ಳ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೨೨ ರಂದು ರಾತ್ರಿ ಕೊಡಿಮರ ನಿಲ್ಲಿಸುವುದರೊಂದಿಗೆ ಆರಂಭವಾಗಿ ಮಾರ್ಚ್ ೪ ರಂದು ದೇವರ ಅವಭೃತ ಸ್ನಾನದೊಂದಿಗೆ ಮುಕ್ತಾಯಗೊಳ್ಳುತ್ತದೆ.

ತಾ. ೨೩, ೨೪, ೨೫ ರಂದು ನಿತ್ಯ ಪೂಜೆಯೊಂದಿಗೆ ಸಂಜೆ ತೂಚಂಬಲಿ, ೨೬ ರಿಂದ ೨೮ ರವರೆಗೆ ಇರ್‌ಬೊಳಕ್, ನಿತ್ಯ ಪೂಜೆ ಹಾಗೂ ತೂಚಂಬಲಿ. ಮಾರ್ಚ್ ೧ ರಿಂದ ೩ರ ತನಕ ಇರುಬೊಳಕ್ ಹಾಗೂ ನಿತ್ಯ ಪೂಜೆ, ತಾ. ೩ ರಂದು ಸಂಜೆ ನೆರಪು ಹಾಗೂ ವಿಷ್ಣು ದೇವರ ಅಲಂಕಾರ ಪೂಜೆ ನಡೆಯಲಿದೆ. ೪ ರಂದು ನಿತ್ಯ ಪೂಜೆ ಅಪರಾಹ್ನ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಸಂಜೆ ಉತ್ಸವ ಮೂರ್ತಿಯ ದರ್ಶನ, ಅವಭೃತ ಸ್ನಾನ ಹಾಗೂ ವಸಂತ ಪೂಜೆ ನಡೆಯಲಿದೆ. ೫ ರಂದು ಪೂರ್ವಾಹ್ನ ಕೊಡಿಮರ ಇಳಿಸುವುದು ಹಾಗೂ ನಿತ್ಯ ಪೂಜೆಯೊಂದಿಗೆ ಹಬ್ಬವು ಸಮಾಪನಗೊಳ್ಳಲಿದೆ.

ಹಬ್ಬದ ಪ್ರಯುಕ್ತ ತಾ. ೨೬ ರಿಂದ ಮಾರ್ಚ್ ೪ ರವರೆಗೆ ತುಲಾಭಾರದ ವ್ಯವಸ್ಥೆ ಇದ್ದು, ಸಂಬAಧಿಸಿದ ಭಕ್ತರು ತುಲಾಭಾರಕ್ಕಿರುವ ಅಕ್ಕಿ ಬೆಲ್ಲ, ಎಣ್ಣೆ, ತರಕಾರಿಗಳನ್ನು ತರತಕ್ಕದೆಂದು ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದ ತಕ್ಕಮುಖ್ಯಸ್ಥರು, ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ತಿಳಿಸಿದೆ.