ಮಡಿಕೇರಿ, ಫೆ. ೧೨: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಯಲು ಮಲವಿಸರ್ಜನೆ ಮುಕ್ತ ಪಟ್ಟಣ ಮಾಡುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಕೈಗೊಳ್ಳಲಾಗಿದೆ. ಆ ದಿಸೆಯಲ್ಲಿ ಜೂನ್ ೨೦೧೮ ರ ಮಾಹೆಯಲ್ಲಿ ಮೊದಲ ಬಾರಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (quಚಿಟiಣಥಿ ಛಿouಟಿಛಿiಟ oಜಿ iಟಿಜiಚಿ (ಕಿಅI)) ವತಿಯಿಂದ ಸೋಮವಾರ ಪೇಟೆ ಪಟ್ಟಣವನ್ನು “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” ಎಂದು ಘೋಷಿಸಲಾಗಿದ್ದು, ತದನಂತರ ಅದೇ ಸಂಸ್ಥೆಯು ಸೋಮವಾರಪೇಟೆ ಪಟ್ಟಣದಲ್ಲಿ ಮರು ಪರಿಶೀಲನೆ ನಡೆಸಿ ಮತ್ತೆ “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” (ಖeಛಿeಡಿಣiಜಿiಛಿಚಿಣioಟಿ) ಪ್ರಮಾಣ ಪತ್ರ ನೀಡಿದೆ ಎಂದು ಸೋಮವಾರಪೇಟೆ ಪ.ಪಂ. ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ತಿಳಿಸಿದ್ದಾರೆ. ಸೋಮವಾರಪೇಟೆ ಪಟ್ಟಣವನ್ನು ಈಗಾಗಲೇ “ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ” ಎಂದು ಘೋಷಣೆ ಮಾಡಿರುವು ದರಿಂದ ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸುಧಾರಿತ ಮತ್ತು ಹೆಚ್ಚು ಸುಧಾರಿತ ಬಯಲು ಮಲ ವಿಸರ್ಜನೆ ಮುಕ್ತ ಪಟ್ಟಣ ಎಂದು ಪ್ರಮಾಣಿಕರಣದ ಘೋಷಣೆಗಾಗಿ ಬೇಕಾಗಿರುವ ಷರತ್ತು ಪೂರೈಸಿದೆ.

ಈ ಬಗ್ಗೆ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ೧೫ ದಿನದೊಳಗೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸುವಂತೆ ಮುಖ್ಯಾಧಿಕಾರಿ ಕೋರಿದ್ದಾರೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸ ಬೇರ್ಪಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು, ರಸ್ತೆ ಮತ್ತು ಖಾಲಿ ಜಾಗದಲ್ಲಿ ಕಟ್ಟಿದ ಡೆಬ್ರಿಸ್ ವಿಲೆ ಮಾಡುವುದು ಮುಂತಾದ ಪ್ರಕರಣಗಳು ಕಂಡುಬAದಲ್ಲಿ ಕರ್ನಾಟಕ ಪೌರಸಭೆಗಳ ಘನತ್ಯಾಜ್ಯ ನಿರ್ವಹಣಾ ಮಾದರಿ ನಿಯಮಗಳು - ೨೦೧೯ ರ ಅನ್ವಯ ನಿಗದಿ ಪಡಿಸಲಾದ ದಂಡ (ರೂ. ೧೦೦ ರಿಂದ ೨೫೦೦೦ ತನಕ) ವಿಧಿಸ ಲಾಗುವುದು ಎಂದು ಸೋಮವಾರ ಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ತಿಳಿಸಿದ್ದಾರೆ.