ಮಡಿಕೇರಿ, ಫೆ. ೧೩: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. ೧೮ ರಂದು ದೃಢ ಕಲಶ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಪುನರ್ ಪ್ರತಿಷ್ಠಾಪನೆ, ಬ್ರಹ್ಮ ಕಲಶ ಅಷ್ಟ ಬಂಧ ಕಾರ್ಯಕ್ರಮಗಳು ಈ ಹಿಂದೆ ನಡೆದು ೪೮ ದಿನಗಳ ಬಳಿಕ ದೃಢ ಕಲಶವನ್ನು ಗಣಹೋಮ ಸಹಿತವಾಗಿ ತಾ. ೧೮ರ ಬೆ. ೯ ರಿಂದ ಮಧ್ಯಾಹ್ನದವರೆಗೆ ನಡೆಸಲಾಗುತ್ತದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ. ಕ್ಷೇತ್ರದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಯವರು ಈ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆ ಬಳಿಕ ತಾ.೧೯ ರಿಂದ ಭಕ್ತಾದಿಗಳಿಗೆ ರುದ್ರಾಭಿಷೇಕ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಗದೀಶ್ ಮಾಹಿತಿಯಿತ್ತಿದ್ದಾರೆ.