ಸೂಕ್ತ ಕ್ರಮಕ್ಕೆ ಒತ್ತಾಯ

ಚೆಯ್ಯಂಡಾಣೆ, ಫೆ, ೧೨: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಮೂಡೇರ, ಹೊಸೊಕ್ಲು, ಪಟ್ಟಚೆರುವಾಳಂಡ ಕುಟುಂಬಸ್ಥರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ, ಏಲಕ್ಕಿ, ಬಾಳೆ ಗಿಡಗಳನ್ನು ಹಾನಿ ಮಾಡಿ ನಷ್ಟವುಂಟು ಮಾಡಿದೆ. ಅರಣ್ಯ ಇಲಾಖೆಗೆ ಆನೆ ಹಾವಳಿ ನಿಯಂತ್ರಣಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಇದಕ್ಕೆ ಸೂಕ್ತ ಕ್ರಮ ಅರಣ್ಯ ಇಲಾಖೆ ಕೈಗೊಂಡು ಇನ್ನು ಮುಂದೆ ಗ್ರಾಮಕ್ಕೆ ಕಾಡಾನೆ ಸೂಕ್ತ ಕ್ರಮಕ್ಕೆ ಒತ್ತಾಯ

ಚೆಯ್ಯಂಡಾಣೆ, ಫೆ, ೧೨: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಮೂಡೇರ, ಹೊಸೊಕ್ಲು, ಪಟ್ಟಚೆರುವಾಳಂಡ ಕುಟುಂಬಸ್ಥರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಕಾಫಿ, ಏಲಕ್ಕಿ, ಬಾಳೆ ಗಿಡಗಳನ್ನು ಹಾನಿ ಮಾಡಿ ನಷ್ಟವುಂಟು ಮಾಡಿದೆ. ಅರಣ್ಯ ಇಲಾಖೆಗೆ ಆನೆ ಹಾವಳಿ ನಿಯಂತ್ರಣಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಇದಕ್ಕೆ ಸೂಕ್ತ ಕ್ರಮ ಅರಣ್ಯ ಇಲಾಖೆ ಕೈಗೊಂಡು ಇನ್ನು ಮುಂದೆ ಗ್ರಾಮಕ್ಕೆ ಕಾಡಾನೆ ಮಾಡಿದ ಸಂದರ್ಭ ಅರಣ್ಯ ಇಲಾಖೆಯವರು ಆಗಮಿಸಿ ಕಾಡಾನೆಯನ್ನು ಕಾಡಿಗಟ್ಟುತ್ತಾರೆ. ಆದರೆ ಪುನಃ ಅರಣ್ಯ ಇಲಾಖೆಯವರು ಮರಳಿದ ತಕ್ಷಣ ಕಾಡಾನೆಗಳು ತೋಟಗಳತ್ತ ಆಗಮಿಸುತ್ತವೆ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ಸರಕಾರ ನಷ್ಟ ಅನುಭವಿಸಿದ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ಒದಗಿಸಿ ಇನ್ನು ಮುಂದೆ ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಕ್ರಮ ಕೈಗೊಳ್ಳುವಂತೆ ಈ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಸಿ.ಎ. ಅಶ್ರಫ್, ಚೆಯ್ಯಂಡಾಣೆ