ಮಡಿಕೇರಿ, ಫೆ. ೧೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೂರ್ನಾಡು ಹೋಬಳಿ ಕ.ಸಾ.ಪರಿಷತ್ ಘಟಕದ ವತಿಯಿಂದ ಮಾರ್ಚ್ ೪ರಂದು ಮೂರ್ನಾಡಿನಲ್ಲಿ ಏರ್ಪಡಿಸಲಾಗಿರುವ ದಾಸ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನಾಟ್ಯ ಹಾಗೂ ರೈತ ಗೀತೆ, ನಾಡ ಗೀತೆ, ಜನಪದ ಗೀತೆಗಳ ಆಧಾರಿತ ಗುಂಪು ನೃತ್ಯ ಪ್ರದರ್ಶನ ನೀಡಲು ಸ್ಪರ್ಧಾ ತಂಡಗಳನ್ನು ಆಹ್ವಾನಿಸಲಾಗಿದೆ ಪಾಲ್ಗೊಳ್ಳುವ ತಂಡಗಳಲ್ಲಿ ಕನಿಷ್ಟ ನಾಲ್ಕು ಮಂದಿ ಇರಬೇಕು. ಐದು ನಿಮಿಷದ ಕಾಲಾ ವಧಿಯ ಒಳಗಿರಬೇಕು. ಪಾಲ್ಗೊಳ್ಳುವ ತಂಡಗಳಿಗೆ ಪ್ರಶಂಸನಾ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಗುವುದು. ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ ೨೦.೨.೨೧. ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮ ವಾಗಿರುತ್ತದೆ ಹೆಚ್ಚಿನ ಮಾಹಿತಿಗೆ ಹಾಗೂ ನೋಂದಾಯಿಸಲು ಸಂಪರ್ಕಿ ಸಬೇಕಾದ ದೂರವಾಣಿ ಸಂಖ್ಯೆಗಳು ೯೬೮೬ ೯೬೦ ೩೨೭ ಮಮತಾ ಶ್ರೀಹರಿ, ೯೪೮೩೨೩೪೩೨೯ ತೆಕ್ಕಡೆ ಪೂರ್ಣಿಮಾ ಬಸಪ್ಪ.