ಭಾಗಮಂಡಲ, ಫೆ. ೧೩: ಸಮೀಪದ ಕೋಪಟ್ಟಿ ಮಹಾವಿಷ್ಣು ದೇವಾಲಯದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಯಿತು. ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ, ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಆಶಿರ್ವಾದದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊAಡವು. ದೇವಾಲಯದಲ್ಲಿ ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತುಬಲಿ ಹಾಗೂ ಅಂಕುರಾರ್ಪಣೆ, ಗಣಪತಿಹೋಮ, ಅಂಕುರಪೂಜೆ, ಬಿಂಬಶುದ್ಧಿ, ಪಾಯಶ್ಚಿತ ಹೋಮ ಹಾಗೂ ಕಲಶಾಭಿಶೇಕ, ದುರ್ಗಾ ನಮಸ್ಕಾರ ಪೂಜೆ, ಅಂಕುರಪೂಜೆ ನಡೆಸಲಾಯಿತು. ಭಗವತಿ ಕ್ಷೇತ್ರದಲ್ಲಿ ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತುಬಲಿ ನೆರವೇರಿತು. ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇAದು ಅಂಕುರಪೂಜೆ, ಶಾಂತಿ ಹೋಮಗಳು, ಹೋಮ ಕಲಶಾಭಿಶೇಕ, ಅನುಜ್ಞಾ ಕಲಶಪೂಜೆ, ಜೀವಕಲಶಪೂಜೆ ಮತ್ತಿತರ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.