ಸೋಮವಾರಪೇಟೆ, ಫೆ. ೧೦: ಇಲ್ಲಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ತಾ. ೧೯ರಂದು ಬೆಳಿಗ್ಗೆ ೬ ಗಂಟೆಯಿAದ ಸಮೀಪದ ಹೊನ್ನಮ್ಮನ ಕೆರೆ ದಡದಲ್ಲಿ ರಥಸಪ್ತಮಿ ಅಂಗವಾಗಿ ೧೦೮ ಸೂರ್ಯನಮಸ್ಕಾರ ಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.

ತಾ. ೧೯ರವರೆಗೆ ಪ್ರತಿದಿನ ೬ ರಿಂದ ೭ ಗಂಟೆಯವರೆಗೆ ಪಟ್ಟಣದ ಹೋಮಿಯೋಪತಿ ಸಭಾಂಗಣದಲ್ಲಿ ಉಚಿತ ಸೂರ್ಯನಮಸ್ಕಾರ ಅಭ್ಯಾಸ ವರ್ಗ ನಡೆಯಲಿದ್ದು, ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ: ೯೯೪೫೯೮೭೭೧೭ ಸಂಖ್ಯೆಗಳನ್ನು ಸಂಪರ್ಕಿ ಸಬಹುದಾಗಿದೆ.