*ಗೋಣಿಕೊಪ್ಪಲು, ಫೆ. ೧೦: ಜನರು ಇಟ್ಟ ನಂಬಿಕೆಗೆ ದ್ರೋಹ ಆಗದ ರೀತಿಯಲ್ಲಿ ಆಡÀಳಿತ ನಡೆಸುವ ಮೂಲಕ ಜವಾಬ್ದಾರಿಯುತ ಸ್ಥಾನವನ್ನು ನಿಭಾಯಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ನೂತನ ಗ್ರಾ.ಪಂ. ಸದಸ್ಯರುಗಳಿಗೆ ಕರೆ ನೀಡಿದರು.

ಕುಟ್ಟ ಸಮುದಾಯ ಭವನದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ನೂತನ ಗ್ರಾ.ಪಂ. ಸದಸ್ಯರುಗಳಿಗೆ ಪಕ್ಷದ ತತ್ವ ಮತ್ತು ನಿಷ್ಠೆಯ ಬಗ್ಗೆ ಮನವರಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಟ್ಟ ಗ್ರಾಮ ಪಂಚಾಯಿತಿ ಬಿಜೆಪಿಯ ಆಡಳಿತಕ್ಕೆ ಬಂದಿರುವುದು ದಾಖಲೆಯಾಗಿದ್ದು, ಕಾರ್ಯಕರ್ತರ ಶ್ರಮಕ್ಕೆ ದಕ್ಕಿದ ಫಲ ಇದಾಗಿದೆ ಎಂದು ಹೇಳಿದರು. ಜನರು ಪಕ್ಷದ ಬಗ್ಗೆ ನಿರೀಕ್ಷೆ ಇಟ್ಟು ಗೆಲುವನ್ನು ನೀಡಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸದೆ ಪ್ರಾಮಾಣಿಕ ಪ್ರಯತ್ನದಿಂದ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರತಿಯೊಬ್ಬ ಸದಸ್ಯನಿಗೂ ಮಹತ್ತರವಾದ ಜವಾಬ್ದಾರಿಯಿದೆ. ಅಧ್ಯಕ್ಷರ ಮೇಲೆಯೇ ಎಲ್ಲಾ ಹೊರೆಯನ್ನು ಹಾಕದೆ ಸಮಾನವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೊಂದಾಣಿಕೆ ಮಾಡಿಕೊಳ್ಳಬೇಕು. ದಾಖಲೆಯಾಗಿದ್ದು, ಕಾರ್ಯಕರ್ತರ ಶ್ರಮಕ್ಕೆ ದಕ್ಕಿದ ಫಲ ಇದಾಗಿದೆ ಎಂದು ಹೇಳಿದರು. ಜನರು ಪಕ್ಷದ ಬಗ್ಗೆ ನಿರೀಕ್ಷೆ ಇಟ್ಟು ಗೆಲುವನ್ನು ನೀಡಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸದೆ ಪ್ರಾಮಾಣಿಕ ಪ್ರಯತ್ನದಿಂದ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿ ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರತಿಯೊಬ್ಬ ಸದಸ್ಯನಿಗೂ ಮಹತ್ತರವಾದ ಜವಾಬ್ದಾರಿಯಿದೆ. ಅಧ್ಯಕ್ಷರ ಮೇಲೆಯೇ ಎಲ್ಲಾ ಹೊರೆಯನ್ನು ಹಾಕದೆ ಸಮಾನವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೊಂದಾಣಿಕೆ ಮಾಡಿಕೊಳ್ಳಬೇಕು. ಜನಾರ್ಧನ, ತೀರ್ಥಮಂಜುನಾಥ್, ದಿವ್ಯ ಮನೋಜ್, ಹೇಮಾ, ಮೀನ, ಮಣಿಕುಮಾರ್, ಮುಂಡುಮಾಡ ಶಾಂತಿ, ಜಿಲ್ಲಾ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊಟ್ಟೆಂಗಡ ರಮೇಶ್, ಕುಟ್ಟ ಮಹಾಶಕ್ತಿ ಕೇಂದ್ರ ಅಧ್ಯಕ್ಷ ತೀತಿರ ಮಂಜುನಾಥ್, ಸಹಪ್ರಮುಖ್ ಕಾಕೇರ ದಿನೇಶ್, ತಾಲೂಕು ಕಾರ್ಯಾಲಯ ಕಾರ್ಯದರ್ಶಿ ಚೋಡುಮಾಡ ದಿನೇಶ್, ವಿ.ಎಸ್.ಎಸ್. ಎನ್. ಬ್ಯಾಂಕ್ ಅಧ್ಯಕ್ಷ ಮಚ್ಚಮಾಡ ಸುಬ್ರಮಣಿ, ಕೃಷಿ ಮೋರ್ಚ ಅಧ್ಯಕ್ಷ ಮುಂಡುಮಾಡ ಕರುಂಬಯ್ಯ, ಕುಟ್ಟ ಮಹಿಳಾ ಮೋರ್ಚಾ ಅಧ್ಯಕ್ಷ ಚೋಡುಮಾಡ ಗೀತಾ ಪೂಣಚ್ಚ, ಓ.ಬಿ.ಸಿ. ಅಧ್ಯಕ್ಷ ಕಾಕೇರ ಸುರೇಶ್, ಎ.ಎನ್.ಡಿ.ಪಿ. ಅಧ್ಯಕ್ಷ ರವಿ ನಾಂತಗಲ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.