ವೀರಾಜಪೇಟೆ, ಫೆ. ೧೦: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ಆಟೋ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ನಗರ ಆಟೋ ಚಾಲಕರ ಸಂಘದ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಸಂಜೀವ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಆಟೋ ಚಾಲಕರ ಸಂಘದ ಅಧ್ಯಕ್ಷ ಶಶಿಧರನ್ ಮಾತನಾಡಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ನಿತ್ಯ ಉಪಯೋಗಿಸುವ ಪ್ರತಿಯೊಂದು ಸಾಮಗ್ರಿಗಳ ಬೆಲೆ ದುಬಾರಿಯಾಗುತ್ತಿದೆ. ವಾಹನಗಳ ಇನ್ಯೂರೆನ್ಸ್, ಪ್ರೀಮಿಯಂ, ಬಿಡಿಭಾಗಗಳ ದರಗಳು ಹೆಚ್ಚಾಗಿದೆ. ೨೦೧೬ನೇ ಇಸವಿಯಲ್ಲಿ ಸಾರಿಗೆ ಪ್ರಾಧಿಕಾರ ಪೆಟ್ರೋಲ್ಗೆ ೬೦ ರೂಪಾಯಿ ದರ ಇರುವಾಗ ೩೦ ರೂ. ಗಳ ಪರಿಷ್ಕೃತ ದರ ನಿಗದಿ ಮಾಡಿದೆ. ಅಧ್ಯಕ್ಷ ಶಶಿಧರನ್ ಮಾತನಾಡಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ನಿತ್ಯ ಉಪಯೋಗಿಸುವ ಪ್ರತಿಯೊಂದು ಸಾಮಗ್ರಿಗಳ ಬೆಲೆ ದುಬಾರಿಯಾಗುತ್ತಿದೆ. ವಾಹನಗಳ ಇನ್ಯೂರೆನ್ಸ್, ಪ್ರೀಮಿಯಂ, ಬಿಡಿಭಾಗಗಳ ದರಗಳು ಹೆಚ್ಚಾಗಿದೆ. ೨೦೧೬ನೇ ಇಸವಿಯಲ್ಲಿ ಸಾರಿಗೆ ಪ್ರಾಧಿಕಾರ ಪೆಟ್ರೋಲ್ಗೆ ೬೦ ರೂಪಾಯಿ ದರ ಇರುವಾಗ ೩೦ ರೂ. ಗಳ ಪರಿಷ್ಕೃತ ದರ ನಿಗದಿ ಮಾಡಿದೆ.