ಮಡಿಕೇರಿ, ಫೆ. ೧೦: ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ತೆಕ್ಕಡ ಸಂತು ಕಾರ್ಯಪ್ಪ ಅವರು ಆಯ್ಕೆಯಾಗಿದ್ದಾರೆ.

ನಿನ್ನೆ ಸಂಘದ ಹಿಂದಿನ ಸಾಲಿನ ಅಧ್ಯಕ್ಷ ಜಿ.ಜೆ. ಸೋನ್ಸ್, ಉಪಾಧ್ಯಕ್ಷ ಸುಂದರ್ ಅವರ ನೇತೃತ್ವದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂತು ಕಾರ್ಯಪ್ಪ, ಉಪಾಧ್ಯಕ್ಷರಾಗಿ ತೆಕ್ಕಡ ಗಿರೀಶ್ ಪೆಮ್ಮಯ್ಯ, ಕಾರ್ಯದರ್ಶಿ ಯಾಗಿ ಅರಸು, ಸಹ ಕಾರ್ಯದರ್ಶಿ ಯಾಗಿ ರಿಯಾಜ್, ಖಜಾಂಚಿಯಾಗಿ ವೀರೇಂದ್ರ, ಸಹ ಖಜಾಂಚಿಯಾಗಿ ಪ್ರಮೋದ್, ಗೌರವ ಅಧ್ಯಕ್ಷರಾಗಿ ಜಿ.ಜೆ. ಸೋನ್ಸ್, ನಿರ್ದೇಶಕರುಗಳಾಗಿ ಸುರೇಶ್, ಟಿ.ಕೆ. ಮಧು, ಬೆಳ್ಯಪ್ಪ, ನವೀನ್, ಲೋಕೇಶ್, ಗಣೇಶ್ ಆಯ್ಕೆಯಾಗಿದ್ದಾರೆ.