ವೀರಾಜಪೇಟೆ, ಫೆ. ೧೦: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕಿರಿಯ ದರ್ಜೆ ಭರತನಾಟ್ಯ ಪರೀಕ್ಷೆಯಲ್ಲಿ ಶೇ. ೮೧ ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿ ಎಂ.ಎ. ಮಧುಮಿತ ಕೊಡಗು ಜಿಲ್ಲೆಗೆ ನಾಲ್ಕನೆ ಸ್ಥಾನ ಗಳಿಸಿದ್ದಾರೆ.
ನಾಟ್ಯಕಲೆಯನ್ನು ಜಿಲ್ಲೆ, ರಾಜ್ಯದ ಹಲವು ವೇದಿಕೆಯಲ್ಲಿ ಪ್ರದರ್ಶನ ಮಾಡಿ ಜನಮನ್ನಣೆಯನ್ನು ಇವರು ಪಡೆದಿದ್ದಾರೆ.
ಎಂ.ಎ. ಮಧುಮಿತಾ ವೀರಾಜಪೇಟೆಯ ಅಮ್ಮತ್ತಿ ಗ್ರಾಮದ ಎಂ.ಆರ್. ಅಶ್ವಿನ್‌ಕುಮಾರ್ ಹಾಗೂ ಎಂ. ಅಂಬಿಕಾ ಅಶ್ವಿನ್ ದಂಪತಿ ಪುತ್ರಿಯಾಗಿದ್ದು ಪ್ರಸ್ತುತ ಅಮ್ಮತ್ತಿಯ ಗುಡ್ ಶೆಫರ್ಡ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದಾರೆ