ಸಿದ್ದಾಪುರ, ಫೆ. ೧೦ :ಇಲ್ಲಿಯ ಫೈ ಸ್ಟಾರ್ ಯುವಕ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆಶಿಕ್ ತಿಳಿಸಿದ್ದಾರೆ. ನೆಲ್ಲಿಹುದಿಕೇರಿಯ ಕಾವೇರಿ ಸೇತುವೆ ಬಳಿಯ ಮೈದಾನದಲ್ಲಿ ತಾ.೨೦ ರಂದು ಸೂಪರ್ ೮ ಪಂದ್ಯಾವಳಿ ಏರ್ಪಡಿ¸ Àಲಾಗಿದ್ದು, ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೨೦ ಸಾವಿರ, ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧೦ ಸಾವಿರ, ಟ್ರೋಫಿ ನೀಡಲಾಗುವುದು ಎಂದು ತಿಳಿಸಿದ್ದಾರೆ.