ಕೂಡಿಗೆ, ಫೆ ೯: ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಮತ್ತು ಮನೆಯ ಸಮೀಪದಲ್ಲಿ ಇಂಗುಗುAಡಿಯನ್ನು ತೆಗೆದು ನೀರಿನ ಸಂರಕ್ಷಣೆಗೆ ಅವಕಾಶಗಳು ಇರುವುದ ರಿಂದ ಗ್ರಾಮದ ಸಾರ್ವಜನಿಕರು ಉದ್ಯೋಗ ಖಾತರಿ ಯೋಜನೆಯ ನೋಂದಣಿಯನ್ನು ಗ್ರಾಮ ಪಂಚಾಯತಿಯಲ್ಲಿ ಮಾಡಿಸಿಕೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಮನವಿ ಮಾಡಿದ್ದಾರೆ.

ಅವರು ಕೂಡಿಗೆ ಗ್ರಾಮದಲ್ಲಿ ಇಂಗು ಗುಂಡಿಯ ಯೋಜನೆಯನ್ನು ಬಗ್ಗೆ ಗ್ರಾಮಸ್ಥರಿಗೆ ಮಾಹಿತಿಯನ್ನು ನೀಡುತ್ತ, ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗಿಸಿಕೊಳ್ಳುವಂತೆ ಕರೆ ನೀಡಿದರು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಇರುವ ಸವಿಸ್ತಾರವಾದ ಮಾಹಿತಿ ನೀಡಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಯಿಷಾ ತಿಳಿಸಿದರು.. ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿಲ್ಪಾ ಸೇರಿದಂತೆ ಸಿಬ್ಬಂದಿ ವರ್ಗದವರು ಭಾಗವಹಿಸಿದರು.