*ಗೋಣಿಕೊಪ್ಪಲು, ಫೆ. ೯: ಒತ್ತಡಗಳಿಲ್ಲದೇ ನಿಧಾನವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಠಾಣಾಧಿಕಾರಿ ಸುಬ್ಬಯ್ಯ ಸಲಹೆ ನೀಡಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ನಡೆದ ೩೨ ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಜೀವವು ಅಮೂಲ್ಯವಾಗಿದೆ. ವಾಹನ ಚಾಲನೆ ಮಾಡುವಾಗ ಬಹಳ ಜಾಗರೂಕತೆಯಿಂದ ಚಾಲನೆ ಮಾಡಬೇಕು. ರಸ್ತೆ ಬದಿಯಲ್ಲಿನ ಪಾದಚಾರಿಗಳ ಬಗ್ಗೆ ಮತ್ತು ಎದುರಿಗೆ ಬರುವ ವಾಹನಗಳ ಬಗ್ಗೆ ಗಮನವಿಟ್ಟು ಆ ದಿಕ್ಕಿನೆಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು. ಮದ್ಯಪಾನ ಮಾಡದೇ ವಾಹನ ಚಾಲನೆ ಮಾಡಬೇಕೆಂದು ಆಟೋ ಹಾಗೂ ವಾಹನ ಚಾಲಕರಿಗೆ ತಿಳಿಸಿದರು. ಈ ಸಂದರ್ಭ ಸಬ್ ಇನ್ಸ್ಪೆಕ್ಟರ್ ಮಂಚಯ್ಯ, ಎ.ಎಸ್.ಐ ಮೇದಪ್ಪ, ಸಿಬ್ಬಂದಿಗಳಾದ ಮಣಿಕಂಠ ಹಾಜರಿದ್ದರು.