ವೀರಾಜಪೇಟೆ, ಫೆ. ೯: ಪ.ಪಂ. ಒಂದನೇ ವಾರ್ಡ್ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ವಿರೋಧವಿದ್ದರು ಕಾಮಗಾರಿ ಆರಂಭಿಸುವುದರ ಬಗ್ಗೆ ನಾಗರಿಕ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಘಟಕವನ್ನು ಸ್ಥಳಾಂತರಿಸುವAತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಮಿತಿ, ಈಗಾಗಲೇ ಅರ್ಧ ಭಾಗದಷ್ಟು ಕೆಲಸ ಪೂರ್ಣಗೊಂಡಿದ್ದು, ಪ್ರಾರಂಭದಿAದಲೇ ಯೋಜನೆಗೆ ಆಕ್ಷೇಪಗಳು ವ್ಯಕ್ತವಾಗಿತ್ತು. ಕೆಲವು ಪಂಚಾಯ್ತಿ ಸದಸ್ಯರುಗಳು ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಘಟಕ ಸ್ಥಾಪನೆಯಿಂದ ರಸ್ತೆ ಇಕ್ಕಟ್ಟಾಗಲಿದ್ದು, ವಾಹನ ಪಾರ್ಕಿಂಗ್, ಸಂಚಾರಕ್ಕೆ ಸಮಸ್ಯೆಯಾಗಲಿದೆ. ಯೋಜನೆಯನ್ನು ಪ್ರಾರಂಭಿಸುವಾಗ ಮುಖ್ಯಾಧಿಕಾರಿಗಳು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದಾರೆ ಎಂದು ನಾಗರಿಕ ಸಮಿತಿ ಸಂಚಾಲಕ ಡಾ. ದುರ್ಗಾ ಪ್ರಸಾದ್ ಆರೋಪಿಸಿದ್ದಾರೆ. ಘಟಕವನ್ನು ಶಾಂತಾ ಚಿತ್ರಮಂದಿರದ ಮುಂದಿನ ಖಾಲಿ ಜಾಗಕ್ಕೆ ಸ್ಥಳಾಂತರಿಸಿದರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.