ಸೋಮವಾರಪೇಟೆ, ಫೆ. ೯: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳನ್ನು ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಬ್ಬೂರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಗಳ್ಳೆ ಗ್ರಾಮದ ಪ್ರಶಾಂತ್, ಯಲಕನೂರು ಹೊಸಳ್ಳಿಯ ಹೆಚ್.ಕೆ. ವಿನೋದ್ ಕುಮಾರ್, ಮೋರಿಕಲ್ಲು ಗ್ರಾಮದ ಅಜಿತ್ಕುಮಾರ್, ಅಬ್ಬೂರುಕಟ್ಟೆಯ ಸಂಭ್ರಮ್, ಚಿಕ್ಕಬ್ಬೂರಿನ ಕೆ.ಜಿ. ಪುಷ್ಪ ಹಾಗೂ ಮಸಗೋಡು ಗ್ರಾಮದ ಜಲಜಾಕ್ಷಿ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿನೋದ್ಕುಮಾರ್ ವಹಿಸಿದ್ದರು. ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಅರೆಯೂರು ಜಯಣ್ಣ, ಅಬ್ಬೂರುಕಟ್ಟೆ ಸಂಘದ ಪ್ರಧಾನ ಕಾರ್ಯದರ್ಶಿ ಬೋಜೇಗೌಡ, ಉಪಾಧ್ಯಕ್ಷ ಚಂದ್ರಪ್ರಸಾದ್, ಸಂಘಟನಾ ಕಾರ್ಯದರ್ಶಿ ಎ.ಹೆಚ್. ತಿಮ್ಮಯ್ಯ, ಸಲಹಾ ಸಮಿತಿಯ ಮುತ್ತಣ್ಣ, ಬಸವರಾಜು, ನಿರ್ದೇಶಕ ರಾದ ಜಯಣ್ಣ, ಕೃಷ್ಣಕಾಂತ್, ಅಶ್ವಥ್, ಶೈಲ, ಪುಷ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.