ಮಡಿಕೇರಿ, ಫೆ. ೯: ತಾ. ೧೭-೫-೨೦೨೦ ರಂದು ಪ್ರಾರಂಭಗೊAಡ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ಮೊದಲ ಸಮಾವೇಶವನ್ನು ತಾ. ೧೪ ನಡೆಸಲು ತೀರ್ಮಾನಿಸ ಲಾಗಿದೆ. ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ಪೊನ್ನಂಪೇಟೆಯ ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್ನ ಸಭಾಂಗಣದಲ್ಲಿ ಚೆಕ್ಕೇರ ಸನ್ನಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಸದಸ್ಯರು ಕೊರೊನಾ ಸಂಬAಧ ಎಲ್ಲ ನಿಯಮಗಳನ್ನು ಪಾಲಿಸಬೇಕಾಗಿ ವೇದಿಕೆಯ ಪ್ರಕಟಣೆ ತಿಳಿಸಿದೆ.