ಶ್ರೀಮಂಗಲ, ಫೆ. ೮: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಒಂದು ವಾರದಿಂದ ಹುಲಿ ಹಗಲಿನಲ್ಲಿಯೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳು ತ್ತಿದ್ದು, ಹಸುವನ್ನು ಸಹ ದಾಳಿ ಮಾಡಿ ಕೊಂದು ಹಾಕಿದೆ. ಕೂಡಲೇ ಅರಣ್ಯ ಇಲಾಖೆ ಹುಲಿ ಸೆರೆಗೆ ಕ್ರಮಕೈಗೊಳ್ಳು ವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಕ್ಕೆ ಹುಲಿ ಕೂಂಬಿAಗ್‌ಗೆ ಆಗಮಿಸಿರುವ ಅರಣ್ಯ ಇಲಾಖೆಯ ತಂಡದೊAದಿಗೆ ಗ್ರಾಮಸ್ಥರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಕಾಫಿ, ಕಾಳುಮೆಣಸು ಕೊಯ್ಲು, ಸ್ಪಿçಂಕ್ಲರ್, ಕಾಫಿ ಗಿಡ ಕಪಾತು ಕೆಲಸದಲ್ಲಿ ಕಾರ್ಮಿಕರು ಮತ್ತು ಬೆಳೆಗಾರರು ತೊಡಗಿದ್ದು, ರಾತ್ರಿ ಸಮಯದಲ್ಲಿ ಸ್ಪಿçಂಕ್ಲರ್ ಕೆಲಸದಲ್ಲಿ ಸಹ ತೊಡಗಿರುತ್ತಾರೆ. ಇಂತಹ ಸಮಯದಲ್ಲಿ ಹುಲಿ ಗ್ರಾಮದಲ್ಲಿ ಬೀಡುಬಿಟ್ಟಿದ್ದು ತೋಟದ ಕೆಲಸಕ್ಕೆ ಮತ್ತು ಜಾನುವಾರುಗಳನ್ನು ಹೊರಗೆ ಮೇಯಿಸಲು ಸಹ ಆತಂಕ ಎದುರಾಗಿದೆ. ಸಕಾಲದಲ್ಲಿ ಕಾಫಿ ಕೊಯ್ಲು ಆಗದಿದ್ದರೆ ಬೆಳೆಗಾರರಿಗೆ ನಷ್ಟ ಉಂಟಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ಸಂಜೆ ಗ್ರಾಮದ ಮಾಪಣಮಾಡ ಬಿಪಿನ್ ಎಂಬವರು ರಸ್ತೆಯಲ್ಲಿ ತೆರಳುತ್ತಿದ್ದ ಹುಲಿಯನ್ನು ಕಂಡು ಆತಂಕಗೊAಡಿದ್ದಾರೆ. ಕಾಫಿ ಕಟಾವಿಗೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಹುಲಿ ಸೆರೆಗೆ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿರುನಾಣಿ ಗ್ರಾ.ಪಂ.ಯಿAದ ಗ್ರಾಮಸ್ಥರ ಪರವಾಗಿ ಅರಣ್ಯ ಇಲಾಖೆಗೆ ಪತ್ರವನ್ನು ಕಳುಹಿಸಲಾಗಿದೆ. ಅರಣ್ಯ ಇಲಾಖೆ ಕೂಡಲೆ ಹುಲಿ ಸೆರೆಗೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭ ಪೊನ್ನಂಪೇಟೆ ವಲಯ ಅರಣ್ಯಧಿಕಾರಿ ರಾಜಪ್ಪ ಅವರೊಂದಿಗೆ ಗ್ರಾಮಸ್ಥರು ದೂರವಾಣಿ ಮೂಲಕ ಮಾತನಾಡಿ ದರು. ತಕ್ಷಣದಿಂದಲೇ ಹುಲಿ ಸೆರೆಗೆ ಮತ್ತಷ್ಟು ಸಿಬ್ಬಂದಿಯೊAದಿಗೆ ಕೂಂಬಿAಗ್ ಕಾರ್ಯಾಚರಣೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಗ್ರಾಮದಲ್ಲಿ ಬೀಡುಬಿಟ್ಟಿರುವ ಹುಲಿಯಿಂದ ಮತ್ತೇ ಜಾನುವಾರು ಮತ್ತು ಜನರಿಗೆ ತೊಂದರೆಯಾದರೆ ಅದಕ್ಕೆ ಅರಣ್ಯ ಇಲಾಖೆಯೇ ನೇರ ಕಾರಣವಾಗಲಿದೆ. ಹುಲಿ ಸೆರೆಗೆ ಕ್ರಮಕೈಗೊಳ್ಳದಿದ್ದರೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಶ್ರೀಮಂಗಲ ವನ್ಯಜೀವಿ ವಲಯದ ಸಿಬ್ಬಂದಿಗಳು ಮತ್ತು ಪೊನ್ನಂಪೇಟೆ ಪ್ರಾದೇಶಿಕ ವಲಯ ಅರಣ್ಯದ ಸಿಬ್ಬಂದಿಗಳು ಕೂಂಬಿAಗ್ ನಲ್ಲಿ ಭಾಗವಹಿಸಿದ್ದಾರೆ. ಗ್ರಾಮಸ್ಥರಾದ ಬಲ್ಯಮೀದೇರಿರ ಗಣೇಶ್, ವಿಜಯಪ್ರಸಾದ್, ಶಿವಕುಮಾರ್, ಚಂಗಪ್ಪ, ಪ್ರತೀಪ್‌ಕುಮಾರ್, ವಿಜು, ಅಣ್ಣೀರ ಬೆಳ್ಯಪ್ಪ, ಸೋನಿ, ಮಾಪಣಮಾಡ ಬಿಪಿನ್ ಅವರು ಹಾಜರಿದ್ದರು.