ಮಡಿಕೇರಿ, ಫೆ. ೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಹಾಲುಗುಂದದ ಪಾಲಂದ ಊರ್ ಮಂದ್ನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಯಿತು.
ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಮಾತನಾಡಿ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನದ ಹಕ್ಕಿನ ಕುರಿತು ಹಾಗೂ ಭೂ ರಾಜಕೀಯ ಸ್ವಾಯತ್ತತೆಯ ಸಂಬAಧ ಮಾಹಿತಿ ನೀಡಿ ಜಾಗೃತಿ ಮೂಡಿಸಿ ದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪ ಗೊಂಡಿತು. ಎಮ್.ಸಿ ಪೊನ್ನಪ್ಪ, ಎಮ್. ಬಿ. ಸುಬ್ರಮಣಿ, ತೇಲಪಂಡ ಅಯ್ಯಪ್ಪ, ಎಮ್.ಯು ತಿಮ್ಮಯ್ಯ, ಮಾಚೇಟಿರ ನಾಚಪ್ಪ, ಎಮ್.ಕೆ ಕುಶಾಲಪ್ಪ ಹಾಗೂ ಇತರರು ಹಾಜರಿದ್ದು ಸಿ.ಎನ್.ಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಮೇಕೇರಿರ ವಿಜಯ ಸ್ವಾಗತಿಸಿದರು, ಅಪ್ಪಾರಂಡ ಸೂರ ವಂದಿಸಿದರು.