ಮಡಿಕೇರಿ, ಫೆ. ೮ : ಇತ್ತೀಚೆಗೆ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬAಧಿಸಿದAತೆ ಇದೀಗ ಆಡಳಿತ ಸ್ಥಾನದ ಜವಾಬ್ದಾರಿಗಾಗಿ ಸ್ಪರ್ಧೆ ಆರಂಭಗೊAಡಿದೆ. ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಕುರಿತಾಗಿ ಚುನಾವಣಾ ಆಯೋಗದ ಮಾರ್ಗ ಸೂಚಿಯನ್ವಯ ಜಿಲ್ಲಾಧಿಕಾರಿಗಳ ಮೂಲಕ ಅಧಿಕೃತವಾಗಿ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.ತಾ. ೨೭ ರಂದು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಗ್ರಾ.ಪಂ.ಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನವನ್ನು ಪ್ರಕಟಿಸಲಾಗಿದ್ದು, ತಾ. ೨೮ ರಂದು ವೀರಾಜಪೇಟೆ ತಾಲೂಕಿನ ಗ್ರಾ.ಪಂ.ಗಳ ಮೀಸಲಾತಿ ಅಂತಿಮಗೊAಡಿದೆ. ಇದರ ಬೆನ್ನಲ್ಲೆ ಅವಕಾಶ ಹೊಂದಿರುವ ಅಭ್ಯರ್ಥಿಗಳು ತಮ್ಮ ಕಸರತ್ತು ಆರಂಭಿಸಿದ್ದಾರೆ.ಕಳೆದ ಅವಧಿಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಅಧಿಕಾರಾವಧಿ ಸಂಪೂರ್ಣ ಐದು ವರ್ಷಗಳದ್ದಾಗಿತ್ತು. ಆದರೆ ಈ ಬಾರಿ ಇದನ್ನು ೩೦ ತಿಂಗಳಿಗೆ ಸೀಮಿತಗೊಳಿಸಲಾಗಿದ್ದು, ಇದೀಗ ಮೊದಲ ಹಂತದ ಅಧಿಕಾರದ ಪ್ರಕ್ರಿಯೆ ನಡೆಯುತ್ತಿದೆ.

ಈಗಾಗಲೇ ಚುನಾವಣೆ ಮುಗಿದಿದ್ದರೂ, ಈ ತನಕ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ನಿಗದಿಪಡಿಸಿರಲಾಗಿಲ್ಲ. ಮೀಸಲಾತಿಯ ಬಗ್ಗೆ ಸ್ಪಷ್ಟನೆ ಇಲ್ಲದಿದ್ದ ಕಾರಣದಿಂದಾಗಿ ಚುನಾಯಿತರಾಗಿರುವ ಸದಸ್ಯರು ಈ ತನಕ ಅದರ ಕುತೂಹಲವನ್ನು ಅದುಮಿಡಬೇಕಾಗಿತ್ತು. ಇದೀಗ ಮೀಸಲಾತಿಯ ವಿವರ ಹೊರಬೀಳುತ್ತಿರುವಂತೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಮೀಸಲಾತಿಯಡಿಯಲ್ಲಿ ಅವಕಾಶವಿರುವ ವಿಜೇತ ಅಭ್ಯರ್ಥಿಗಳು ಅಧ್ಯಕ್ಷ - ಉಪಾಧ್ಯಕ್ಷ ಪಟ್ಟಕ್ಕಾಗಿ ಪ್ರಯತ್ನ ಆರಂಭಿಸಿದ್ದರೆ, ಅವರ ಬೆಂಬಲಿಗರು, ವ್ಯಾಪ್ತಿಯ ಕ್ಷೇತ್ರಗಳಿಂದ ಅವಕಾಶ ಹೊಂದಿರುವ

(ಮೊದಲ ಪುಟದಿಂದ) ಅಭ್ಯರ್ಥಿಗಳ ಪರವಾಗಿ ಆಯಾ ವಿಭಾಗದ ಜನತೆಯೂ ಕಸರತ್ತು ಆರಂಭಿಸಿದ್ದಾರೆ. ರಾಜಕೀಯ ಪಕ್ಷ ಆಧಾರಿತವಾದ ಚುನಾವಣೆ ಅಥವಾ ಆಯ್ಕೆ ಇದಲ್ಲದಿದ್ದರೂ ತೆರೆಮರೆಯಲ್ಲಿ ರಾಜಕೀಯ ವಿಚಾರವೇ ಪ್ರಮುಖ ಪಾತ್ರ ವಹಿಸಲಿರುವ ಹಿನ್ನೆಲೆಯಲ್ಲಿ ಆಯಾ ಪಕ್ಷದ ಪ್ರಮುಖರ ಪಾಲಿಗೆ ಇದೊಂದು ಸವಾಲಿನ ವಿಚಾರದಂತಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಆಯಾ ಪಂಚಾಯಿತಿಗಳಲ್ಲಿ ಅಧ್ಯಕ್ಷ - ಉಪಾಧ್ಯಕ್ಷರು ಯಾರು ಎಂಬದಕ್ಕಾಗಿ ಮತ್ತೊಂದು ಚುನಾವಣೆ ವಿಜೇತ ಅಭ್ಯರ್ಥಿಗಳ ನಡುವೆ ನಡೆಯಲಿದ್ದು, ಮುಂದಿನ ಕೆಲವು ದಿನಗಳ ಕಾಲ ಬಿರುಸಿನ ರಾಜಕೀಯ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಎದುರಾಗಲಿದೆ. ಕೆಲವು ಪಂಚಾಯಿತಿಗಳಲ್ಲಿ ಈಗ ಹೊರಬಿದ್ದಿರುವ ಮೀಸಲಾತಿಯಂತೆ ಒಬ್ಬೊಬ್ಬರೇ ಇರುವ ಅಭ್ಯರ್ಥಿಗಳು ಅನಾಯಾಸವಾಗಿ ಈ ಸ್ಥಾನ ಅಲಂಕರಿಸುತ್ತಿರುವ ಬೆಳವಣಿಗೆಯೂ ಕಂಡು ಬಂದಿದೆ.