ಭಾಗಮಂಡಲ,ಫೆ.೮: ದೇಶಕ್ಕೆ, ಸ್ವಾತಂತ್ರö್ಯ ಹೋರಾಟಕ್ಕೆ ವೀರಯೋಧರನ್ನು ಕೊಟ್ಟಂತಹ ಈ ನಾಡಿನಲ್ಲಿ ವೀರ ಮಕ್ಕಳ ಭವಿಷ್ಯ ಕಟ್ಟುವ ಕಾಯಕ ಮಾಡಬೇಕಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಕಾವೇರಿ ವಿದ್ಯಾಸಂಘದ ವತಿಯಿಂದ ನಡೆಸಲಾಗುತ್ತಿದ್ದ ಕಾವೇರಿ ಪ.ಪೂ.ಕಾಲೇಜನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆರ್ಶೀವಚನ ವಿದ್ಯಾಸಂಘದ ವತಿಯಿಂದ ನಡೆಸಲಾಗುತ್ತಿದ್ದ ಕಾವೇರಿ ಪ.ಪೂ.ಕಾಲೇಜನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆರ್ಶೀವಚನ ಬರುತ್ತಿದ್ದು, ಬುದ್ಧ, ವಿವೇಕಾನಂದ ರಂತಹ ಜ್ಞಾನಿಗಳನ್ನು ನೀಡಿದ ರಾಷ್ಟç ನಮ್ಮದು. ನಮ್ಮ ಮಠವೂ ಕೂಡ ವಿಶೇಷಚೇತನರೂ ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ಈ ದೇಶದ ಬಹು ದೊಡ್ಡ ಹುದ್ದೆಯನ್ನು ಅಲಂಕರಿಸಲು ಸಹಕಾರಿಯಾಗಿದೆ. ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಶಿಕ್ಷಕರ ಜವಾಬ್ದಾರಿಗಿಂತ ಹೆಚ್ಚಿನ ಜವಾಬ್ದಾರಿ ಪೋಷಕರಲ್ಲಿದೆ. ಮುಂದಿನ ಯುವ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಮಠಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಅತಿಥಿಗಳಾಗಿದ್ದ ಶಾಸಕ ಕೊಂಬಾರನ ಜಿ. ಬೋಪಯ್ಯ ಮಾತನಾಡಿ, ದೇಶದ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಅನೇಕ ಹಿರಿಯ

(ಮೊದಲ ಪುಟದಿಂದ) ಚೇತನಗಳು ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರದ ಪಾತ್ರ ವಹಿಸಿದ್ದು, ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಆಗಬೇಕಿದೆ. ಸಮಾಜ ಸಂಸ್ಕಾರಯುಕ್ತ, ಸುಶಿಕ್ಷಿತ ಸಮಾಜ ಆಗಬೇಕಿದೆ, ಆಗಿನ ಕಾಲದಲ್ಲಿ ಯಾವದೇ ಫಲಾಪೇಕ್ಷೆಯಿಲ್ಲದೆ ಈ ನಾಡಿನ ಅನೇಕ ಹಿರಿಯರ ಸ್ಥಳದಾನ, ಶ್ರಮದಾನದ ಫಲವಾಗಿ ಕಾವೇರಿ ವಿದ್ಯಾಸಂಸ್ಥೆಯಿAದು ಭಾಗಮಂಡಲ ನಾಡಿನಲ್ಲಿ ಹೆಸರು ಗಳಿಸಿದೆ. ಈ ಆಧುನಿಕ ಯುಗದಲ್ಲಿ ಯಾವ ರೀತಿಯ ಶಿಕ್ಷಣ ದೊರೆಯಬೇಕೋ ಅದನ್ನು ನೀಡಲು ಆದಿಚುಂಚನಗಿರಿ ಮಠ ಹಾಗೂ ಸ್ವಾಮೀಜಿ ಸಿದ್ಧವಾಗಿದ್ದು, ಈ ನಾಡಿನ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿರಿಯ ಚೇತನಗಳ ಪರಿಶ್ರಮದ ಫಲವಾಗಿ ಇಂದು ಹಳ್ಳಿ ಹಳ್ಳಿಗಳಲ್ಲಿ ಬೆಳ್ಳಿ ಹಬ್ಬ, ವಜ್ರ ಮಹೋತ್ಸª,À ಶತಮಾನೋತ್ಸವ ಆಚರಿಸಿದ ಸರಕಾರೀ ಶಾಲೆಗಳು ನಮ್ಮ ಕಣ್ಣ ಮುಂದೆ ಇದ್ದು, ಪ್ರಸ್ತುತ ಶಿಕ್ಷಣ ದೊರೆಯಬೇಕೋ ಅದನ್ನು ನೀಡಲು ಆದಿಚುಂಚನಗಿರಿ ಮಠ ಹಾಗೂ ಸ್ವಾಮೀಜಿ ಸಿದ್ಧವಾಗಿದ್ದು, ಈ ನಾಡಿನ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಿರಿಯ ಚೇತನಗಳ ಪರಿಶ್ರಮದ ಫಲವಾಗಿ ಇಂದು ಹಳ್ಳಿ ಹಳ್ಳಿಗಳಲ್ಲಿ ಬೆಳ್ಳಿ ಹಬ್ಬ, ವಜ್ರ ಮಹೋತ್ಸª,À ಶತಮಾನೋತ್ಸವ ಆಚರಿಸಿದ ಸರಕಾರೀ ಶಾಲೆಗಳು ನಮ್ಮ ಕಣ್ಣ ಮುಂದೆ ಇದ್ದು, ಪ್ರಸ್ತುತ ಚೆದುಕಾರು ಕುಟುಂಬದ ಪರವಾಗಿ ಪಟ್ಟೆದಾರ ಸೋಮಯ್ಯ, ಹೊಸಗದ್ದೆ ಕುಟುಂದ ಪರವಾಗಿ ರಾಜಾ ಗೌರವ ಸ್ವೀಕರಿಸಿದರು. ವಿದ್ಯಾಸಂಸ್ಥೆಯ ದಾಖಲಾತಿಯನ್ನು ಆಡಳಿತ ಮಂಡಳಿ ನಿರ್ದೇಶಕರು ಗಣ್ಯರ ಸಮ್ಮುಖದಲ್ಲಿ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರ ನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮಿಜಿ, ಚುಂಚನಕಟ್ಟೆ ಶಾಖೆಯ ಶಿವಾನಂದ ಸ್ವಾಮೀಜಿ, ವಿವಿಧ ಶಾಖಾ ಮಠದ ಸ್ವಾಮೀಜಿಗಳು, ಜಿ.ಪಂ. ಸದಸ್ಯರುಗಳಾದ ಕವಿತಾ ಪ್ರಭಾಕರ್, ಕೆ.ಪಿ.ಚಂದ್ರಕಲಾ, ಮಠದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಗಳು, ಗಣ್ಯರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲೆ ಜಾನಕಿ ಮೋಹನ್ ಸಾಗ್ವತಿಸಿ, ಉಪನ್ಯಾಸಕ ದಿವಾಕರ್ ನಿರೂಪಿಸಿದರು.

ತಲಕಾವೇರಿಯಲ್ಲಿ ಪೂಜೆ

ಇದಕ್ಕೂ ಮುನ್ನ ಬೆಳಿಗ್ಗೆಯೇ ತಲಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡಿದ ನಿರ್ಮಲಾನಂದನಾಥ ಸ್ವಾಮೀಜಿಗಳು ವಿಶೇಷ ಪೂಜೆ ಸಲ್ಲಿಸಿದರು. ಉತ್ತಮ ಮಳೆ - ಬೆಳೆಯೊಂದಿಗೆ ನಾಡು ಸುಭಿಕ್ಷವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ವಿವಿಧ ಶಾಖಾಮಠದ ಸ್ವಾಮೀಜಿಗಳು ಹಾಜರಿದ್ದರು.

- ಸುನಿಲ್ ಕುಯ್ಯಮುಡಿ, ಸುಧೀರ್ ಹೊದ್ದೆಟ್ಟಿ