ಸಿದ್ದಾಪುರ, ಫೆ. ೮: ಕೂಡುಗದ್ದೆಯ ‘ಕಾರ್ಗಿಲ್ ಬಾಯ್ಸ್’ ಸಂಘದ ವತಿಯಿಂದ ಗುಹ್ಯ ಕ್ರೀಡಾಕೂಟ ಕೂಡುಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಎಂ.ಎಸ್. ವೆಂಕಟೇಶ್, ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಹಾಗೂ ಗ್ರಾಮಸ್ಥರು ಒಗ್ಗೂಡಲು ಈ ಕ್ರೀಡಾಕೂಟ ಸಹಕಾರಿಯಾಗುತ್ತದೆ. ಸಣ್ಣ ಗ್ರಾಮದಲ್ಲಿ ಪ್ರೋ ಕಬಡ್ಡಿ ಮಾದರಿಯಲ್ಲಿ ಟೂರ್ನಿ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರವಿ, ಗ್ರಾ.ಪಂ ಸದಸ್ಯರಾದ ಎಂ.ಎ ಆನಂದ, ದೇವಯಾನಿ, ಅಬಿತಾ ಗಿರೀಶ್, ರೀನಾ ತುಳಸಿ, ಪೂರ್ಣಿಮಾ, ಲೋಕೇಶ್, ಎ.ಎಸ್ ಹಸ್ಸನ್ ಪ್ರಮುಖರಾದ ಪೂವಯ್ಯ, ಖಾದರ್, ಬಷೀರ್, ಮುಸ್ತಫ, ಪ್ರವೀಣ್, ಅಜೀಜ್, ಶಾಜಿ, ಸೂರಿ, ಸುನಿಲ್, ಸುಜಿಕುಮಾರ್, ಶೈಮ ಸೇರಿದಂತೆ ಇನ್ನಿತರರು ಇದ್ದರು.

ಕಬಡ್ಡಿ ಟೂರ್ನಿಯಲ್ಲಿ ಸೆವೆನ್ ಸ್ಟಾರ್ ತಂಡ ಗ್ರೀನ್ ಸ್ಟಾರ್ ತಂಡವನ್ನು ಮಣಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು. ಪೋನಿಕ್ಸ್ ತಂಡ ಮೂರನೆಯ ಬಹುಮಾನ ಪಡೆದುಕೊಂಡಿತು.

೧೪ ವರ್ಷದ ಒಳಗಿನ ಬಾಲಕರಿಗೆ ಕಬಡ್ಡಿ ಪಂದ್ಯಾಟ ನಡೆಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸ್ಮೆöÊಲ್ ಕಿಲ್ಲರ್ ತಂಡ ಪ್ರಥಮ- ಕಕ್ಕಟ್ಟುಕಾಡು ಬುಲ್ಸ್ ತಂಡ ದ್ವಿತೀಯ, ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ತಂಡ ಪ್ರಥಮ ಹಾಗೂ ರಶ್ಮಿ ಫ್ರೆಂಡ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಗ್ರಾಮೀಣ ಕ್ರೀಡಾಕೂಟವು ಆಕರ್ಷಕವಾಗಿತ್ತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಕ್ಕೆ ಆಗಮಿಸಿದ್ದರು.