ಸೋಮವಾರಪೇಟೆ, ಫೆ. ೬: ಇಲ್ಲಿನ ಭುವನ ಮಂದಾರ ರೈತ ಉತ್ಪಾದಕರ ಸಂಸ್ಥೆಯ ೨೦೧೯-೨೦ನೇ ಸಾಲಿನ ಸರ್ವ ಸದಸ್ಯರ ಸಭೆ ಸಫಾಲಿ ಕಾನ್ಫರೆನ್ಸ್ ಸಭಾಂಗಣದಲ್ಲಿ ತಾ. ೮ ರಂದು ಪೂರ್ವಾಹ್ನ ೧೧ ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಪೂಜಾಶ್ರೀ ತಿಳಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ. ಡಿಸಿಲ್ವ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ನಬಾರ್ಡ್ ಬ್ಯಾಂಕ್‌ನ ಡಿ.ಡಿ.ಎಂ. ಶ್ರೀನಿವಾಸ್, ಓಡಿಪಿ ಸಂಸ್ಥೆಯ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಭಾಗವಹಿಸಲಿದ್ದಾರೆ.