ಈ ಶನಿವಾರ ಬಹಳ ಮಹತ್ವದ ದಿನವಾಗಿದೆ. ನವಗ್ರಹ ಪೂಜೆ ನೆರವೇರಿಸಿ ದ್ದರಿಂದಾಗಿ ಬಹಳ ಒಳ್ಳೆಯದಾಗುತ್ತದೆ. ರಾಷ್ಟçಪತಿಗಳು ತಲಕಾವೇರಿ ಸನ್ನಿಧಿಯಲ್ಲಿ ನೆರವೇರಿಸಿದ ಪೂಜೆಯಿಂದಾಗಿ ದೇಶಕ್ಕೇ ಒಳಿತಾಗಲಿದೆ. ಕಾರ್ಯಸಿದ್ಧಿಯಾಗುತ್ತದೆ. ಕಾವೇರಿ ಕ್ಷೇತ್ರದಲ್ಲಿ ದೇಶದ ಗಣ್ಯಾತಿಗಣ್ಯರು ಮಹೋನ್ನತ ಪೂಜಾಕೈಂಕರ್ಯ ನೆರವೇರಿಸಿದ್ದರಿಂದಾಗಿ ಸಮಾಜಕ್ಕೆ ಖಂಡಿತಾ ಒಳಿತುಂಟಾಗುತ್ತದೆ ಎಂದು ಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ ನುಡಿದರು. ಕೈಲಾಸಾಶ್ರಮಕ್ಕೆ ಅನೇಕ ಗಣ್ಯರು ಬಂದು ಪೂಜೆ ನೆರವೇರಿಸುತ್ತಾರೆ. ಈ ಬಗ್ಗೆ ಮಾಹಿತಿ ಪಡೆದ ರಾಷ್ಟçಪತಿ ಕುಟುಂಬದ ಸದಸ್ಯರು, ರಾಮನಾಥ್ ಕೋವಿಂದ್ ಕಾವೇರಿ ಉಗಮತಾಣಕ್ಕೆ ಭೇಟಿ ನೀಡುತ್ತಿರುವುದಾಗಿ ತಮಗೆ ತಿಳಿಸಿದರು. ಅವರ ಇಚ್ಚೆಯಂತೆ ಸಕಲ ಸಿದ್ಧತೆಗಳೊಂದಿಗೆ ಕಾವೇರಿ ಕ್ಷೇತ್ರದಲ್ಲಿ ಮಹತ್ವದ ಪೂಜೆ ನೆರವೇರಿಸಲಾಗಿದೆ. ರಾಷ್ಟçಪತಿಯೂ ಕಾವೇರಿ ಪವಿತ್ರ ಕ್ಷೇತ್ರದಲ್ಲಿ ಪೂಜೆ ಸಲ್ಲಿಕೆಯಾದ ಬಗ್ಗೆ ಸಂತೃಪ್ತರಾಗಿದ್ದಾರೆೆ ಎಂದೂ ಸ್ವಾಮೀಜಿ ಹೇಳಿದರು.ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ಮಾತನಾಡಿ ರಾಷ್ಟçದಲ್ಲಿ ಶಾಂತಿ, ಸೌಹಾದÀðತೆ ಹಾಗೂ ರಾಷ್ಟçಕ್ಕೆ ಸುಭಿಕ್ಷೆ ತರುವಂತಾಗಲಿ ಎಂದು ಪ್ರಾರ್ಥಿಸಲಾಯಿತು ಎಂದರು.