ಜನರಲ್ ತಿಮ್ಮಯ್ಯ ಜನಿಸಿದ ಮಡಿಕೇರಿಯ ‘‘ಸನ್ನಿಸೈಡ್’’ ಮನೆಯು ‘‘ ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ’’ ಎಂದು ಅಧಿಕೃತ ಉದ್ಘಾಟನೆ ಆಗಲು ದಿನಗಣನೆ ಪ್ರಾರಂಭವಾಗಿರುವುದು ತೀರಾ ಸಂತಸದಾಯಕ ಸಂಗತಿ ಆಗಿದೆ. ಭಾರತೀಯ ರಕ್ಷಣಾ ಪಡೆಗಳ ಪರಮೋಚ್ಚ ಸೇನಾನಿ - ಸುಪ್ರೀಂ ಕಮಾಂಡರ್ ಆಗಿರುವ... ಭಾರತ ದೇಶದ ಘನತೆವೆತ್ತ ರಾಷ್ಟçಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ದಿನಾಂಕ: ೦೬.೦೨.೨೦೨೧ನೇ ಶನಿವಾರ ಅಪರಾಹ್ನ ೩.೧೫ಕ್ಕೆ ಈ ವಿಶಿಷ್ಟ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿರುವರು... ಎಂಬುದನ್ನು ನೆನೆದಾಗ ಮೈ ರೋಮಾಂಚನ ಆಗುತ್ತದೆ.

೭೨ ವರ್ಷಗಳ ಹಿಂದೆ... ಸುಪ್ರೀಂ

ಸುಮಾರು ೭೨ ವರ್ಷಗಳ ಹಿಂದಿನ ಸನ್ನಿವೇಶವೊಂದನ್ನು ಇಲ್ಲಿ ನೆನಪಿಸಿಕೊಳ್ಳಲು ಹೆಮ್ಮೆ ಆಗುತ್ತಿದೆ. ಸ್ವತಂತ್ರ ಭಾರತದ ಪ್ರಪ್ರಥಮ ಮಹಾದಂಡನಾಯಕರಾಗಿದ್ದ ಅಂದಿನ ಜನರಲ್ ಕೊಡಂದೇರ ಎಂ. ಕಾರ್ಯಪ್ಪನವರು ೧೯೪೮-೪೯ರ ಅಲ್ಪ ಅವಧಿಗೆ ಮೂರೂ ಸೇನೆಗಳ ಕಮಾಂಡರ್ - ಇನ್ - ಚೀಫ್ (ಈಗಿನ ಸುಪ್ರೀಂ ಕಮಾಂಡರ್) ಆಗಿದ್ದರು. ೧೯೫೦ರಲ್ಲಿ ನೆಹರೂ ಸರಕಾರ... ಸಮಗ್ರ ರಾಷ್ಟçದ ಭದ್ರತೆ ಹಾಗೂ ರಾಜಕೀಯ ಪರಮಾಧಿಕಾರವನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ... ಆ ಉನ್ನತ ಅಧಿಕಾರವನ್ನು ರಾಷ್ಟçಪತಿಗಳಿಗೆ ವರ್ಗಾಯಿಸಿತು. ಬಳಿಕ, ಭೂಸೇನೆ, ವಾಯುಸೇನೆ, ನೌಕಾಸೇನೆಗಳಿಗೆ ಪ್ರತ್ಯೇಕ ಮುಖ್ಯಸ್ಥರನ್ನು ನೇಮಿಸುವ ಕ್ರಮ ಚಾಲನೆಗೆ ಬಂದಿತು.

ಅಪರೂಪದ ಸೇನಾ ದಾಖಲೆ

ಭಾರತೀಯ ಸೇನೆಯ ಪ್ರಪ್ರಥಮ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ (ಚಿಮ್ಮ) ಮತ್ತು ೪ನೇ ಮುಖ್ಯಸ್ಥರಾದ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ (ಡುಬ್ಬು) - ಈ ಈರ್ವ ಸೇನಾನಿಗಳು ಒಂದೇ ಜಿಲ್ಲೆ, ಒಂದೇ ತಾಲೂಕು, ಒಂದೇ ಊರು, ಒಂದೇ ಪಟ್ಟಣದ, ಒಂದೇ ಕುಟುಂಬದ ಸಹೋದರರಾಗಿದ್ದರು... ಎಂಬುದು ಸೇನಾಚರಿತ್ರೆಯಲ್ಲಿ ಬಹಳ ಅಪರೂಪದ ದಾಖಲೆ ಎನಿಸುತ್ತಿದೆ.

ತಿಮ್ಮಯ್ಯನವರ ತಂದೆ ತಿಮ್ಮಯ್ಯ

ಜನರಲ್ ತಿಮ್ಮಯ್ಯನವರ ಮೂಲ ಹೆಸರು : ಕೊಡಂದೇರ ತಿಮ್ಮಯ್ಯ ಸುಬ್ಬಯ್ಯ ಎಂದಾಗಿತ್ತು. ರಾವ್‌ಬಹಾದೂರ್ ಚಪ್ಪುಡಿರ ಸೋಮಯ್ಯನವರ ಪುತ್ರ - ಚೆಪ್ಪುಡಿರ ತಿಮ್ಮಯ್ಯ. ಇವರ ಪುತ್ರನೇ ಜನರಲ್ ತಿಮ್ಮಯ್ಯ. ಕೂನೂರು ಇಂಗ್ಲಿಷ್ ಶಾಲೆಗೆ ಸೇರಿಸುವ ಸಂದರ್ಭದಲ್ಲಿ... ಕೊಡಂದೇರ ತಿಮ್ಮಯ್ಯನವರ ಪುತ್ರ ಸುಬ್ಬಯ್ಯ ಎಂದಿದ್ದುದು ದಾಖಲೆಯಲ್ಲಿ ‘‘ಕೆ.ಎಸ್. ತಿಮ್ಮಯ್ಯ’’ ಎಂದಾಗಿ ಹೋಗಿತ್ತು. ಹೀಗಾಗಿ ತಿಮ್ಮಯ್ಯನವರ ಮಗ ತಿಮ್ಮಯ್ಯ ಆಗಿಬಿಟ್ಟರು.

ಸಂಸಾರ : ಜನರಲ್ ತಂದೆ ಕೊಡಂದೇರ ತಿಮ್ಮಯ್ಯ... ತಾಯಿ ಚೆಪ್ಪುಡಿರ ಸೀತವ್ವ (ಚೀತವ್ವ) ಆಗರ್ಭ ಶ್ರೀಮಂತರು. ಹಿಂದಿನ ಮಡಿಕೇರಿ ಪಟ್ಟಣದ ಸುಮಾರು ಅರ್ಧ ಭಾಗದಷ್ಟು ಭೂಮಿ ಇವರಿಗೆ ಸೇರಿದುದಾಗಿತ್ತು. ಕಾಫಿತೋಟ ಪ್ರತ್ಯೇಕ ಇತ್ತು. ತಿಮ್ಮಯ್ಯ - ಸೀತವ್ವ ದಂಪತಿಗಳಿಗೆ ಮೂರು ಗಂಡು, ಮೂರು ಹೆಣ್ಣು ಸೇರಿದಂತೆ ಒಟ್ಟು ಆರು ಮಕ್ಕಳು. ಮೂವರಲ್ಲಿ ಮೂವರು ಪುತ್ರರೂ ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆಸಲ್ಲಿಸಿದವರೇ.

ಬಾಲ್ಯ : ತಿಮ್ಮಯ್ಯ ಕೂನೂರು, ಬೆಂಗಳೂರಿನಲ್ಲಿ ಮೊದಲ ಹಂತದ ವಿದ್ಯಾಭ್ಯಾಸ ಪಡೆದರು. ವಿದ್ಯಾರ್ಥಿ ಆಗಿದ್ದಾಗಲೇ ಹಾಕಿ, ಕ್ರಿಕೆಟ್, ಫುಟ್‌ಬಾಲ್ ಟೆನ್ನಿಸ್, ಸ್ಕಾ÷್ವಷ್ ಕ್ರೀಡೆಗಳಲ್ಲಿ ವಿಶೇಷಾಸಕ್ತಿ. ಬಾಲಕನಾಗಿದ್ದಾಗ ತುಂಟತನ, ಕೀಟಲೆ, ಹಟಮಾರಿತನ, ಒರಟುತನ ಮೈಗೂಡಿತ್ತು. ೧೬ರಲ್ಲಿ ಮೊದಲ ಹಂತದ ವಿದ್ಯಾಭ್ಯಾಸ ಮುಗಿಸಿದ ೫ ಅಡಿ ೯ ಇಂಚು ಎತ್ತರದ ಬಾಲಕ ಡೆಹರಾಡೂನ್‌ನ ‘‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಮಿಲಿಟರಿ ಕಾಲೇಜ್’’ ಸೇರಿದರು. ಬಳಿಕ ಇಂಗ್ಲೆAಡ್‌ನ ಸ್ಟಾö್ಯಂಡರ್ಸ್ನಲ್ಲಿ ಪ್ರವೇಶ ಪಡೆದು ಸೇನಾಧಿಕಾರಿಯಾಗಿ ನಿಯುಕ್ತಿಗೊಂಡರು.

ಸೈನ್ಯಾಧಿಕಾರಿಯಾಗಿ: ಆರು ಅಡಿ ಎತ್ತರ, ಆಜಾನುಬಾವು ದೇಹ, ಒರಟು ಮೈ ನೋಡಿದರೆ ಇನ್ನೊಮ್ಮೆ ನೋಡಬೇಕೆಂಬ ಆಕರ್ಷಣೆ... ಇಂತಹ ವ್ಯಕ್ತಿತ್ವದ ತಿಮ್ಮಯ್ಯ ಸೈನ್ಯಾಧಿಕಾರಿಯಾಗಿ ಬದುಕು ಪ್ರಾರಂಭಿಸಿದ ನಂತರ ಹಿಂತಿರುಗಿ ನೋಡಲಿಲ್ಲ. ಪ್ರಪಂಚ ಸಮರದ ಸಂದರ್ಭ ಆಗಿದ್ದುದರಿಂದ ಭಾರತ ದೇಶ ಮಾತ್ರವಲ್ಲದೆ, ಪ್ರಪಂಚದ ಉದ್ದಗಲಕ್ಕೂ ಕಾರ್ಯನಿಮಿತ್ತ ಸುತ್ತಾಡಿದರು. ವೀರಾವೇಶದಿಂದ ಹೋರಾಡಿದರು. ಸೇನೆಯಲ್ಲಿ ಲೆಫ್ಟಿನೆಂಟ್ - ಕ್ಯಾಪ್ಟನ್ ಜನರಲ್ ತಿಮ್ಮಯ್ಯ ಜನಿಸಿದ ಮಡಿಕೇರಿಯ ‘‘ಸನ್ನಿಸೈಡ್’’ ಮನೆಯು ‘‘ ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ’’ ಎಂದು ಅಧಿಕೃತ ಉದ್ಘಾಟನೆ ಆಗಲು ದಿನಗಣನೆ ಪ್ರಾರಂಭವಾಗಿರುವುದು ತೀರಾ ಸಂತಸದಾಯಕ ಸಂಗತಿ ಆಗಿದೆ. ಭಾರತೀಯ ರಕ್ಷಣಾ ಪಡೆಗಳ ಪರಮೋಚ್ಚ ಸೇನಾನಿ - ಸುಪ್ರೀಂ ಕಮಾಂಡರ್ ಆಗಿರುವ... ಭಾರತ ದೇಶದ ಘನತೆವೆತ್ತ ರಾಷ್ಟçಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು ದಿನಾಂಕ: ೦೬.೦೨.೨೦೨೧ನೇ ಶನಿವಾರ ಅಪರಾಹ್ನ ೩.೧೫ಕ್ಕೆ ಈ ವಿಶಿಷ್ಟ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿರುವರು... ಎಂಬುದನ್ನು ನೆನೆದಾಗ ಮೈ ರೋಮಾಂಚನ ಆಗುತ್ತದೆ.

೭೨ ವರ್ಷಗಳ ಹಿಂದೆ... ಸುಪ್ರೀಂ

ಸುಮಾರು ೭೨ ವರ್ಷಗಳ ಹಿಂದಿನ ಸನ್ನಿವೇಶವೊಂದನ್ನು ಇಲ್ಲಿ ನೆನಪಿಸಿಕೊಳ್ಳಲು ಹೆಮ್ಮೆ ಆಗುತ್ತಿದೆ. ಸ್ವತಂತ್ರ ಭಾರತದ ಪ್ರಪ್ರಥಮ ಮಹಾದಂಡನಾಯಕರಾಗಿದ್ದ ಅಂದಿನ ಜನರಲ್ ಕೊಡಂದೇರ ಎಂ. ಕಾರ್ಯಪ್ಪನವರು ೧೯೪೮-೪೯ರ ಅಲ್ಪ ಅವಧಿಗೆ ಮೂರೂ ಸೇನೆಗಳ ಕಮಾಂಡರ್ - ಇನ್ - ಚೀಫ್ (ಈಗಿನ ಸುಪ್ರೀಂ ಕಮಾಂಡರ್) ಆಗಿದ್ದರು. ೧೯೫೦ರಲ್ಲಿ ನೆಹರೂ ಸರಕಾರ... ಸಮಗ್ರ ರಾಷ್ಟçದ ಭದ್ರತೆ ಹಾಗೂ ರಾಜಕೀಯ ಪರಮಾಧಿಕಾರವನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ... ಆ ಉನ್ನತ ಅಧಿಕಾರವನ್ನು ರಾಷ್ಟçಪತಿಗಳಿಗೆ ವರ್ಗಾಯಿಸಿತು. ಬಳಿಕ, ಭೂಸೇನೆ, ವಾಯುಸೇನೆ, ನೌಕಾಸೇನೆಗಳಿಗೆ ಪ್ರತ್ಯೇಕ ಮುಖ್ಯಸ್ಥರನ್ನು ನೇಮಿಸುವ ಕ್ರಮ ಚಾಲನೆಗೆ ಬಂದಿತು.

ಅಪರೂಪದ ಸೇನಾ ದಾಖಲೆ

ಭಾರತೀಯ ಸೇನೆಯ ಪ್ರಪ್ರಥಮ ಮುಖ್ಯಸ್ಥರಾದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ (ಚಿಮ್ಮ) ಮತ್ತು ೪ನೇ ಮುಖ್ಯಸ್ಥರಾದ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ (ಡುಬ್ಬು) - ಈ ಈರ್ವ ಸೇನಾನಿಗಳು ಒಂದೇ ಜಿಲ್ಲೆ, ಒಂದೇ ತಾಲೂಕು, ಒಂದೇ ಊರು, ಒಂದೇ ಪಟ್ಟಣದ, ಒಂದೇ ಕುಟುಂಬದ ಸಹೋದರರಾಗಿದ್ದರು... ಎಂಬುದು ಸೇನಾಚರಿತ್ರೆಯಲ್ಲಿ ಬಹಳ ಅಪರೂಪದ ದಾಖಲೆ ಎನಿಸುತ್ತಿದೆ.

ತಿಮ್ಮಯ್ಯನವರ ತಂದೆ ತಿಮ್ಮಯ್ಯ

ಜನರಲ್ ತಿಮ್ಮಯ್ಯನವರ ಮೂಲ ಹೆಸರು : ಕೊಡಂದೇರ ತಿಮ್ಮಯ್ಯ ಸುಬ್ಬಯ್ಯ ಎಂದಾಗಿತ್ತು. ರಾವ್‌ಬಹಾದೂರ್ ಚಪ್ಪುಡಿರ ಸೋಮಯ್ಯನವರ ಪುತ್ರ - ಚೆಪ್ಪುಡಿರ ತಿಮ್ಮಯ್ಯ. ಇವರ ಪುತ್ರನೇ ಜನರಲ್ ತಿಮ್ಮಯ್ಯ. ಕೂನೂರು ಇಂಗ್ಲಿಷ್ ಶಾಲೆಗೆ ಸೇರಿಸುವ ಸಂದರ್ಭದಲ್ಲಿ... ಕೊಡಂದೇರ ತಿಮ್ಮಯ್ಯನವರ ಪುತ್ರ ಸುಬ್ಬಯ್ಯ ಎಂದಿದ್ದುದು ದಾಖಲೆಯಲ್ಲಿ ‘‘ಕೆ.ಎಸ್. ತಿಮ್ಮಯ್ಯ’’ ಎಂದಾಗಿ ಹೋಗಿತ್ತು. ಹೀಗಾಗಿ ತಿಮ್ಮಯ್ಯನವರ ಮಗ ತಿಮ್ಮಯ್ಯ ಆಗಿಬಿಟ್ಟರು.

ಸಂಸಾರ : ಜನರಲ್ ತಂದೆ ಕೊಡಂದೇರ ತಿಮ್ಮಯ್ಯ... ತಾಯಿ ಚೆಪ್ಪುಡಿರ ಸೀತವ್ವ (ಚೀತವ್ವ) ಆಗರ್ಭ ಶ್ರೀಮಂತರು. ಹಿಂದಿನ ಮಡಿಕೇರಿ ಪಟ್ಟಣದ ಸುಮಾರು ಅರ್ಧ ಭಾಗದಷ್ಟು ಭೂಮಿ ಇವರಿಗೆ ಸೇರಿದುದಾಗಿತ್ತು. ಕಾಫಿತೋಟ ಪ್ರತ್ಯೇಕ ಇತ್ತು. ತಿಮ್ಮಯ್ಯ - ಸೀತವ್ವ ದಂಪತಿಗಳಿಗೆ ಮೂರು ಗಂಡು, ಮೂರು ಹೆಣ್ಣು ಸೇರಿದಂತೆ ಒಟ್ಟು ಆರು ಮಕ್ಕಳು. ಮೂವರಲ್ಲಿ ಮೂವರು ಪುತ್ರರೂ ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆಸಲ್ಲಿಸಿದವರೇ.

ಬಾಲ್ಯ : ತಿಮ್ಮಯ್ಯ ಕೂನೂರು, ಬೆಂಗಳೂರಿನಲ್ಲಿ ಮೊದಲ ಹಂತದ ವಿದ್ಯಾಭ್ಯಾಸ ಪಡೆದರು. ವಿದ್ಯಾರ್ಥಿ ಆಗಿದ್ದಾಗಲೇ ಹಾಕಿ, ಕ್ರಿಕೆಟ್, ಫುಟ್‌ಬಾಲ್ ಟೆನ್ನಿಸ್, ಸ್ಕಾ÷್ವಷ್ ಕ್ರೀಡೆಗಳಲ್ಲಿ ವಿಶೇಷಾಸಕ್ತಿ. ಬಾಲಕನಾಗಿದ್ದಾಗ ತುಂಟತನ, ಕೀಟಲೆ, ಹಟಮಾರಿತನ, ಒರಟುತನ ಮೈಗೂಡಿತ್ತು. ೧೬ರಲ್ಲಿ ಮೊದಲ ಹಂತದ ವಿದ್ಯಾಭ್ಯಾಸ ಮುಗಿಸಿದ ೫ ಅಡಿ ೯ ಇಂಚು ಎತ್ತರದ ಬಾಲಕ ಡೆಹರಾಡೂನ್‌ನ ‘‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಮಿಲಿಟರಿ ಕಾಲೇಜ್’’ ಸೇರಿದರು. ಬಳಿಕ ಇಂಗ್ಲೆAಡ್‌ನ ಸ್ಟಾö್ಯಂಡರ್ಸ್ನಲ್ಲಿ ಪ್ರವೇಶ ಪಡೆದು ಸೇನಾಧಿಕಾರಿಯಾಗಿ ನಿಯುಕ್ತಿಗೊಂಡರು.

ಸೈನ್ಯಾಧಿಕಾರಿಯಾಗಿ: ಆರು ಅಡಿ ಎತ್ತರ, ಆಜಾನುಬಾವು ದೇಹ, ಒರಟು ಮೈ ನೋಡಿದರೆ ಇನ್ನೊಮ್ಮೆ ನೋಡಬೇಕೆಂಬ ಆಕರ್ಷಣೆ... ಇಂತಹ ವ್ಯಕ್ತಿತ್ವದ ತಿಮ್ಮಯ್ಯ ಸೈನ್ಯಾಧಿಕಾರಿಯಾಗಿ ಬದುಕು ಪ್ರಾರಂಭಿಸಿದ ನಂತರ ಹಿಂತಿರುಗಿ ನೋಡಲಿಲ್ಲ. ಪ್ರಪಂಚ ಸಮರದ ಸಂದರ್ಭ ಆಗಿದ್ದುದರಿಂದ ಭಾರತ ದೇಶ ಮಾತ್ರವಲ್ಲದೆ, ಪ್ರಪಂಚದ ಉದ್ದಗಲಕ್ಕೂ ಕಾರ್ಯನಿಮಿತ್ತ ಸುತ್ತಾಡಿದರು. ವೀರಾವೇಶದಿಂದ ಹೋರಾಡಿದರು. ಸೇನೆಯಲ್ಲಿ ಲೆಫ್ಟಿನೆಂಟ್ - ಕ್ಯಾಪ್ಟನ್ ತಿಮ್ಮಯ್ಯ ಗೌರವಾರ್ಥ ವಿಶೇಷ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿತು. ೭.೪.೨೦೦೬ರಲ್ಲಿ ಮಡಿಕೇರಿಯಲ್ಲಿ... ಅಂದಿನ ರಾಷ್ಟçಪತಿ ಡಾ|| ಎಪಿಜೆ ಅಬ್ದುಲ್‌ಕಲಾಂ ಉಪಸ್ಥಿತಿಯಲ್ಲಿ ಸಾರ್ವಜನಿಕ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು. ಮಡಿಕೇರಿ, ಗೋಣಿಕೊಪ್ಪದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಾಪನೆ ಆಯಿತು. ಕೊಡಗು - ಮೈಸೂರು - ಬೆಂಗಳೂರು - ದೆಹಲಿ - ಆಗ್ರ.... ಮುಂತಾದೆಡೆಗಳಲ್ಲಿ ರಸ್ತೆ, ಪಾರ್ಕ್, ಕಟ್ಟಡ, ಉಪನಗರಕ್ಕೆ ತಿಮ್ಮಯ್ಯ ಹೆಸರಿಡಲಾಯಿತು. ಬೆಂಗಳೂರು ಎಎಸ್‌ಸಿ ಸೆಂಟರ್‌ನಲ್ಲಿ ತಿಮ್ಮಯ್ಯ ಸ್ಮಾರಕ ಸ್ಥಾಪಿಸಲಾಯಿತು. ಕುಮೋನ್ ರೆಜಿಮೆಂಟ್‌ನಲ್ಲಿ ತಿಮ್ಮಯ್ಯ ಸ್ಮಾರಕ ಸಂಗ್ರಹಾಲಯ ಸ್ಥಾಪನೆ ಆಯಿತು. ಜನರಲ್ ತಿಮ್ಮಯ್ಯ ಸ್ಟೇಡಿಯಂ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ, ಜನರಲ್ ತಿಮ್ಮಯ್ಯ ಪ್ರಶಸ್ತಿ ಇತ್ಯಾದಿಗಳೂ ಸ್ಥಾಪಿಸಲ್ಪಟ್ಟಿತು.

ಭಾರತರತ್ನ- ಏಕಿಲ್ಲ : ಇಷ್ಟೆಲ್ಲ ಅಪರೂಪದ ಸೇವೆ - ಸಾಧನೆಗಳ ಸರದಾರನಾಗಿರುವ ಜನರಲ್ ತಿಮ್ಮಯ್ಯ ಅವರಿಗೆ ಭಾರತ ಸರಕಾರ ಮರಣೋತ್ತರವಾಗಿಯಾದರೂ ‘‘ಭಾರತ ರತ್ನ ಪ್ರಶಸ್ತಿ’’ ಕೊಡಬೇಕಾಗಿತ್ತು; ಭಾರತೀಯ ಸೈನಿಕ ಪರಂಪರೆಯ ಮಹತ್ವವನ್ನು ವಿಶ್ವಾದ್ಯಂತ ಸಾರಿ, ದೇಶದ ಶೌರ್ಯ ಸಾಹಸದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ವೀರಸೇನಾನಿ... ಸಾಧಕ ಸೇನಾನಿಗೆ ‘‘ಭಾರತ ರತ್ನ’’ ಕೊಡುವುದರ ಮೂಲಕ ಭಾರತೀಯ ಸೈನಿಕರ ಹುರುಪು - ಉತ್ಸಾಹ ಇಮ್ಮಡಿಯಾಗುವಂತೆ ಮಾಡಿ, ರಾಷ್ಟçವನ್ನು ಮತ್ತಷ್ಟು ಭದ್ರತಳಹದಿಯಲ್ಲಿ ರಕ್ಷಿಸಲು ಮುಂದಾಗಬೇಕಾಗಿತ್ತಲ್ಲವೇ?

ಸೈನಿಕ ಜಿಲ್ಲೆಯ ಭವಿಷ್ಯ

ಮಡಿಕೇರಿಯಲ್ಲಿ ಬಹುನಿರೀಕ್ಷಿತ ‘‘ಜನರಲ್ ತಿಮ್ಮಯ್ಯ ಮ್ಯೂಸಿಯಂ’’ ಸಾಕಾರಗೊಂಡಿದೆ. ಮುಂದೆ ಸ್ಥಳೀಯ ಯುವಜನರ ಬಾಳು ಭವಿಷ್ಯಕ್ಕೆ ಇದರಿಂದ ಉತ್ತಮ ಸಂದೇಶ, ಸ್ಫೂರ್ತಿ ಸಿಗುವಂತಾಗಬೇಕು. ‘‘ವಾರ್ ಮ್ಯೂಸಿಯಂ’’ ಎನ್ನುವುದು ಕೇವಲ ಪ್ರೇಕ್ಷಣೀಯ, ಅಲಂಕಾರಿಕ ಕೇಂದ್ರ ಮಾತ್ರ ಆದರೆ ಸಾಲದು. ಅದರಿಂದ ಸ್ಫೂರ್ತಿ ಪಡೆದು, ಯುವಜನರು ಉತ್ತಮ ಸಾಧಕರಾಗಲು ಪಣತೊಡುವಂತೆಯೂ ಆಗಬೇಕು. ಈ ಹಿನ್ನೆಲೆಯಲ್ಲಿ ಅವಲೋಕಿಸಿದರೆ, ಹಂಬಲಿಸುವ ಅರ್ಹ ಯುವಜನರಿಗೆ ಅಂದರೆ ಸಮರ್ಥ ಸೇನಾ ಬದುಕನ್ನು ಬಯಸಿದ ಎಳೆಯ ಮಕ್ಕಳಿಗೆ ಹಲವು ಹನ್ನೊಂದು ಅವಕಾಶಗಳಿರುವುದನ್ನು ಮನಗಾಣಬಹುದಾಗಿದೆ. ಉದಾಹರಣೆ:-

ಸೈನಿಕ ಶಾಲೆ: ಭಾರತೀಯ ಸೇನಾ ಪಡೆಗಳಲ್ಲಿ ಸಾಧನೆಗೈದ ಸಹಸ್ರಾರು ಸಬಲರು ದೇಶದ ವಿವಿಧ ಸೈನಿಕ ಶಾಲೆಯ ಮೂಲದಿಂದ ಬಂದವರೆAಬುದು ಗಮನಾರ್ಹ. ಕೊಡಗಿನ ಕೂಡಿಗೆ ಸೈನಿಕ ಶಾಲೆಯಲ್ಲಿ ಓದಿದ ಹಲವಾರು ಮಂದಿ ಇಂದು ವಿವಿಧೆಡೆಗಳಲ್ಲಿ ಸೇನಾಧಿಕಾರಿಗಳಾಗಿದ್ದಾರೆ. ಸೈನಿಕ ಶಾಲೆಯಲ್ಲಿ ೬ನೇ ತರಗತಿಯಿಂದ ೧೨ನೇ ತರಗತಿಯವರೆಗೆ ೭ ವರ್ಷ ಸಿಬಿಎಸ್‌ಇ ಪಠ್ಯ ಕ್ರಮದ ಪಾಠಪ್ರವಚನ, ಮಿಲಿಟರಿ ತರಬೇತಿ, ಕುದುರೆ ಸವಾರಿ, ಈಜುಗಾರಿಕೆ, ಹಲವು ಹನ್ನೊಂದು ವಿಧದ ಕ್ರೀಡಾತರಬೇತಿ, ಎನ್‌ಸಿಸಿ ಇಂತಹ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಿವೆ. ೧೨ನೇ ತರಗತಿ - ೨ನೇ ಪಿಯುಸಿ ತೇರ್ಗಡೆಯಾದ ಬಳಿಕ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSಅ) ನಡೆಸುವ ಎನ್‌ಡಿಎ ಪರೀಕ್ಷೆಗೆ ಹಾಜರಾಗಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾದರೆ, ಅಂತಹವರು ಮಿಲಿಟರಿಗೆ ಆಯ್ಕೆಗೊಂಡು, ಮುಂದಿನ ತಾಂತ್ರಿಕ ವಿದ್ಯಾಭ್ಯಾಸವನ್ನು ಮಿಲಿಟರಿ ಕಾಲೇಜ್‌ನಲ್ಲಿಯೇ ಪೂರೈಸಿ, ಡಿಗ್ರಿ ಮತ್ತು ಸೇನಾ ತರಬೇತಿಯನ್ನು ಒಟ್ಟಿಗೆ ಪಡೆದು, ಪಿಯುಸಿ ನಂತರದ ಐದು ವರ್ಷಗಳೊಳಗೆ ಪದವೀಧರ ಮತ್ತು ಅಧಿಕಾರಿ ಆಗಿ ಪೋಸ್ಟಿಂಗ್ ಪಡೆಯಬಹುದು. ಗಟ್ಟಿಗತನ ಇದ್ದಲ್ಲಿ, ಅಂದಾಜು ೫೦ರ ಪ್ರಾಯದಲ್ಲಿ ಆರ್ಮಿ ಮುಖ್ಯಸ್ಥ - ನೇವಿ ಮುಖ್ಯಸ್ಥ - ಏರ್‌ಫೋರ್ಸ್ ಮುಖ್ಯಸ್ಥ ಆಗುವ ಸಾಧ್ಯತೆಯೂ ಇದೆ. ಪಿಯುಸಿ ಬಾಲಕರಿಗೆ ಈ ಎನ್‌ಡಿಎ ಪರೀಕ್ಷೆ ಸಾಮಾನ್ಯವಾಗಿ ಏಪ್ರಿಲ್ - ಅಕ್ಟೋಬರ್‌ನಲ್ಲಿ ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಸೈನಿಕ ಸ್ಕೂಲ್‌ನಲ್ಲಿ ೬ನೇ ತರಗತಿ ಮತ್ತು ೯ನೇ ತರಗತಿಗೆ ಹೊಸದಾಗಿ ಸೇರಬಹುದು. ಈಗÀ ಬಾಲಕಿಯರಿಗೂ ಮುಕ್ತ ಅವಕಾಶ ಒದಗಿಸಲಾಗಿದೆ. ಇದಕ್ಕೆ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾದರೆ, ಮುಂದಿನ ಜನವರಿಯಲ್ಲಿ ಸ್ಪರ್ಥಾತ್ಮಕ ಪರೀಕ್ಷೆ ನಡೆಯುತ್ತದೆ.

ಸೇನಾ ಬದುಕು ಬೇಡವಾ: ಸೈನಿಕ ಶಾಲೆಯಲ್ಲಿ ಓದಿದವರೆಲ್ಲರೂ ಸೈನ್ಯಕ್ಕೆ ಸೇರಬೇಕೆಂಬ ಕಡ್ಡಾಯ ಇಲ್ಲ. ಸೈನಿಕ ಶಾಲೆಯಲ್ಲಿ ಏಳು ವರ್ಷ ಕಲಿತ ಜ್ಞಾನದ ಆಧಾರದಲ್ಲಿ ಪ್ಯಾರಾಮಿಲಿಟರಿ, ಪೊಲೀಸ್, ಫಾರೆಸ್ಟ್, ಬ್ಯಾಂಕಿAಗ್ ಸಂಸ್ಥೆ, ಐಎಎಸ್ - ಐಪಿಎಸ್‌ನಂತಹ ಸಿವಿಲ್ ಸರ್ವಿಸ್... ಈ ಕ್ಷೇತ್ರಗಳಲ್ಲಿಯೂ ಉತ್ತಮ ಉದ್ಯೋಗದ ಅವಕಾಶ ಇದೆ. ಸೈನಿಕ ಶಾಲೆಯಲ್ಲಿ ಓದಿದ ಮಕ್ಕಳಿಗೆ ವಿಶೇಷವಾದ ಶಿಸ್ತು, ಸಂಯಮ, ಧೈರ್ಯ, ಸಾಹಸದಂತಹ ಗುಣಗಳು ಸಾಕಷ್ಟು ರಕ್ತಗತವಾಗಿರುತ್ತದೆ. ಹೀಗಿರುವಲ್ಲಿ, ಅಂತಹವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವುದು ಸುಲಭಸಾಧ್ಯ ಆಗಬಲ್ಲದು.

ಕುಂಠಿತವಾದ ಆಸಕ್ತಿ : ಇತ್ತೀಚೆಗಿನ ವರ್ಷಗಳಲ್ಲಿ ಕೊಡಗಿನವರು ಸೈನ್ಯಕ್ಕೆ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಅನುಕೂಲ ಸೂತ್ರ, ನಿರ್ದಿಷ್ಟ ಗುರಿಯ ಕೊರತೆ, ಸಂಸಾರದಲ್ಲಿ ಕ್ಷೀಣಿಸಿರುವ ಮಕ್ಕಳ ಸಂಖ್ಯೆ, ಐಟಿಬಿಟಿಯ ಗೀಳು, ಪೋಷಕರ ದ್ವಂದ್ವ ನೀತಿ, ಅಪಪ್ರಚಾರ... ಇಂತಹ ಅಂಶಗಳು ಕಾರಣ ಆಗಿರಬಹುದು. ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಯುವಕರು ಸಿಪಾಯಿ ಆಯ್ಕೆ, ಸೈನಿಕ ಶಾಲೆ ಪ್ರವೇಶ ಅಥವಾ ಅಧಿಕಾರಿಗಳಾಗಲು ಸ್ಪರ್ಧಾತ್ಮಕ ಪರೀಕ್ಷೆ... ಇವೆಲ್ಲದಕ್ಕೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ಕಾಣಬಹುದಾಗಿದೆ. ಇಂತಹ ಸೂಕ್ಷö್ಮ ವಿಷಯದಲ್ಲಿ ಕೊಡಗಿನಲ್ಲಿ ಕಾಲಪರಿಸ್ಥಿತಿಗೆ ತಕ್ಕುದಾದ ಜನಜಾಗೃತಿಯ ಕೆಲಸ ಆಗಬೇಕಾಗಿದೆ.

ಬೇರೆ ಅವಕಾಶಗಳು: ಆರ್ಮಿ- ನೇವಿ - ಏರ್‌ಫೋರ್ಸ್ ಸೇರಿದ ಮಿಲಿಟರಿ ಅಧಿಕಾರಿಗಳಾಗಿ, ಅಧಿಕಾರೇತರರಾಗಿ ಸೇರ್ಪಡೆಗೊಳ್ಳಲು ಹಲವು ವಿಧದ ಮಾರ್ಗ, ಪರೀಕ್ಷೆ, ಆಯ್ಕೆ ವಿಧಾನಗಳಿವೆ. ಸಿಪಾಯಿ ಆಗಿ ಸೇರಲು ರಿಕ್ರೂಟ್‌ಮೆಂಟ್ ರ‍್ಯಾಲಿ, ಬ್ರಾಂಚ್‌ರಿಕ್ಸೂಟಿAಗ್ ಆಫೀಸ್ ಮೂಲಕ ಸಾಧ್ಯ ಇದೆ. ಅಧಿಕಾರಿಗಳಾಗಿ ಸೇರಲು ಮೊದಲ ಅವಕಾಶ... ಸೈನಿಕ ಶಾಲೆಯ ೬ನೇ ಅಥವಾ ೯ನೇ ತರಗತಿಗೆ ಪ್ರವೇಶ ಪಡೆದು, ಪಿಯುಸಿಯ ನಂತರ ಎನ್‌ಡಿಎ ಪರೀಕ್ಷೆಗೆ ಹಾಜರಾಗಿ ತೇರ್ಗಡೆಯಾಗಿ ಮಿಲಿಟರಿ ಕಾಲೇಜ್‌ಗೆ ಸೇರ್ಪಡೆಯಾಗುವುದು. ಇದಲ್ಲದಿದ್ದರೆ ಬೇರೆಡೆ ಓದಿ, ಯುಪಿಎಸ್‌ಸಿ ನಡೆಸುವ ಎನ್‌ಡಿಎ ಪರೀಕ್ಷೆಯನ್ನು ಎದುರಿಸುವುದು.

ಪದವಿ ಪಡೆದ ಕೂಡಲೇ ಯುಪಿಎಸ್‌ಸಿ ನಡೆಸುವ - ಕಂಬೈAಡ್ ಡಿಫೆನ್ಸ್ ಸರ್ವಿಸ್ ಸಿಡಿಎಸ್ ಪರೀಕ್ಷೆಗೆ ಹಾಜರಾಗಿ, ತೇರ್ಗಡೆಯಾದರೆ, ನೇರವಾಗಿ ಅಧಿಕಾರಿಯ ತರಬೇತಿಗೆ ಸೇರ್ಪಡೆ ಆಗಬಹುದು. ಇದೂ ಅಲ್ಲದೆ, ಡೈರೆಕ್ಟ್ ಎಂಟ್ರಿ, ಟೆಕ್ನಿಕಲ್ ಎಂಟ್ರಿ, ಎಜುಕೇಷನಲ್ ಕೋರ್, ಸ್ಪೋರ್ಟ್ಸ್ ಖೋಟ, ಎನ್‌ಸಿಸಿ ಖೋಟ, ಶಾರ್ಟ್ ಸರ್ವಿಸ್ ಕಮಿಷನ್, ಮಿಲಿಟರಿ ನರ್ಸಿಂಗ್ ಸರ್ವಿಸ್, ಮೆಡಿಕಲ್ - ಡೆಂಟಲ್ -ವೆಟ್- ಲೀಗಲ್ ಡಿಗ್ರಿಯವರ ಎಂಟ್ರಿ... ಹೀಗೆ ಹಲವು ಹನ್ನೊಂದು ವಿಧದಲ್ಲಿ ಸೇರ್ಪಡೆಗೊಳ್ಳಲು ಮುಕ್ತ ಅವಕಾಶಗಳಿವೆ. ಜೊತೆಗೆ ಆರ್ಮಿಸ್ಕೂಲ್, ಮಿಲಿಟರಿ ಸ್ಕೂಲ್, ಮಿಲಿಟರಿ ಕಾಲೇಜುಗಳಿಗೆ ನೇರವಾಗಿ ಸೇರ್ಪಡೆಯಾಗಲು ಪ್ರತ್ಯೇಕ ಅವಕಾಶ ಇವೆ.

ಮಾಹಿತಿ ಎಲ್ಲಿಂದ: ಇವೆಲ್ಲದರ ಬಗ್ಗೆ ವಿವರವಾದ ಮಾಹಿತಿಗೆ - ಇಂಟರ್‌ನೆಟ್, ಸೈನಿಕ್ ಕಲ್ಯಾಣ ಇಲಾಖೆ, ಎನ್‌ಸಿಸಿ ಕಚೇರಿ, ತರಬೇತಿ ಕೇಂದ್ರ, ಕೋಚಿಂಗ್ ಕೇಂದ್ರ, ಉದ್ಯೋಗ ವಾರ್ತೆ, ಅನುಭವಸ್ಥರಿಂದ ಪಡೆಯಬಹುದು,

ಸಾರ್ಥಕತೆ: ಸೈನಿಕ ಜಿಲ್ಲೆ ಎಂಬ ವಿಶಿಷ್ಟ ಹೆಸರನ್ನು ಉಳಿಸಿಕೊಳ್ಳಬೇಕಾದರೆ, ಸೈನಿಕ ಪರಂಪರೆಯೂ ಹಿಂದಿನAತೆ ಮುಂದುವರಿಯಬೇಕಾದುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮಮಟ್ಟದ ಜನಜಾಗೃತಿ - ಸೈನಿಕ ಜಾಗೃತಿಯ ಕಾರ್ಯಕ್ರಮಗಳ ಅವಶ್ಯಕತೆಯೂ ಇದೆ.

ಜನರಲ್ ತಿಮ್ಮಯ್ಯ ಹುಟ್ಟಿದ ನಾಡಿನಲ್ಲಿ ಮುಂದೆಯೂ ಇನ್ನಷ್ಟು ಜನರಲ್‌ಗಳು ಜನಿಸುವಂತಾಗಬೇಕು. ಹಾಗಾದಾಗ ಮಾತ್ರ ‘‘ವಾರ್ ಮ್ಯೂಸಿಯಂ’’ನAತಹ ಸ್ಮಾರಕಕ್ಕೆ ಸಾರ್ಥಕತೆ ಬರುವುದು. ಕೊಡಗಿನ ಉಜ್ವಲ ಸೇನಾ ಪರಂಪರೆಯನ್ನು ಮುಂದೆಯೂ ಬಲಪಡಿಸಲು ಎಲ್ಲರು ಒಂದಾಗಿ ಪ್ರಯತ್ನಿಸೋಣ. ಜನರಲ್ ತಿಮ್ಮಯ್ಯ ಅವರ ನೆನಪು ಚಿರಸ್ಥಾಯಿ ಆಗಿ ಉಳಿಯಲಿ.

ಫೋರಂ... ಪ್ರಯತ್ನ : ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಸ್ಮಾರಕ ಕೇಂದ್ರ ರೂಪತಾಳಲು- ‘‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂ (ಈಒಅ -ಉಖಿ ಈಔಖUಒ) ಸಾಕಷ್ಟು ಶ್ರಮಿಸಿದ ‘‘ಸನ್ನಿಸೈಡ್’’ನಲ್ಲದ್ದ ಹಳೆಯ ಆರ್‌ಟಿಓ ಕಚೇರಿಯನ್ನು ಖಾಲಿ ಮಾಡಿಸಲು; ಅನಂತರ ಅಲ್ಲಿದ್ದ ಸ್ಟಾಫ್ ಕ್ವಾರ್ಟಸ್ ಅನ್ನು ತೆರವುಗೊಳಿಸಲು; ಸ್ಮಾರಕ ಕೇಂದ್ರ ಸ್ಥಾಪನೆಗೆ ಸರಕಾರದ ಅನುದಾನ ಗಿಟ್ಟಿಸಲು; ಸ್ಮಾರಕ ಕೇಂದ್ರಕ್ಕೆ ಮಿಲಿಟರಿಯ ವಿವಿಧ ವಿಭಾಗಗಳಿಂದ ವಸ್ತು - ವಿಶೇಷತೆಗಳನ್ನು ಮಡಿಕೇರಿಗೆ ತರಿಸಲು; ಸ್ಮಾರಕ ಕೇಂದ್ರವನ್ನು ಉನ್ನತಮಟ್ಟದ ಮ್ಯೂಸಿಯಂ ಆಗಿ ಪರಿವರ್ತಿಸಲು ಹತ್ತಾರು ವರ್ಷಗಳಿಂದ ನಿರಂತರವಾಗಿ ಪರಿಶ್ರಮಿಸಿದೆ. ಸ್ಥಳೀಯ ಜವಾನನಿಂದ ರಾಷ್ಟçಪತಿಯವರೆಗೆ ನೂರಾರು ಗಣ್ಯಾತಿಗಣ್ಯರನ್ನು ಸಂಪರ್ಕಿಸಿ ಸಹಾಯ ಪಡೆದಿದೆ. ಫೋರಂನ ಪೋಷಕ ಸದಸ್ಯರು, ಸಲಹೆಗಾರರೂ ಆಗಿದ್ದ ಕೆಲವು ಹಿರಿಯ ನಿವೃತ್ತ ಅಧಿಕಾರಿಗಳೂ ಈ ಕಾರ್ಯದಲ್ಲಿ ಸಕ್ರಿಯರಾಗಿ ಸಹಾಯಹಸ್ತ ನೀಡಿದ್ದಾರೆ. ಸ್ಥಳೀಯರೂ, ಮಾಧ್ಯಮದವರೂ, ಜಿಲ್ಲಾಡಳಿತವೂ ಸಹಕರಿಸಿದೆ. ಇವರೆಲ್ಲರ ಸಹಾಯ - ಸಹಕಾರ ಸ್ಮರಣೀಯವಾಗಿದೆ.

ಒಟ್ಟಿನಲ್ಲಿ, ಮಡಿಕೇರಿಯ ಈ ನೂತನ ಯುದ್ಧಸ್ಮಾರಕ ಕೇಂದ್ರವು... ಪುಟ್ಟ ಕೊಡಗಿನ ದಿಟ್ಟತನವನ್ನು ಸಾರುವಂತಹ... ಜನಸ್ನೇಹಿ ಕೇಂದ್ರವಾಗಿ ಖ್ಯಾತಿ ಪಡೆದು, ಯುವಜನರಿಗೆ ಶಿಸ್ತು, ಸಾಹಸ, ಸ್ಫೂರ್ತಿಯ ನೆಲೆಯಾಗಿ ರೂಪುಗೊಳ್ಳಲಿ ಎಂದು ಹಾರೈಸೋಣ.

- ಉಳ್ಳಿಯಡ ಎಂ. ಪೂವಯ್ಯ

ಗೌರವ ಕಾರ್ಯದರ್ಶಿ

ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂ, ಮಡಿಕೇರಿ

Ph: ೯೪೪೮೭೨೦೧೬೮