*ಗೋಣಿಕೊಪ್ಪಲು, ಫೆ. ೫: ಜಾನುವಾರುಗಳ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ತಿತಿಮತಿ ಭಾಗದ ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಾನುವಾರುಗಳ ಸಾವಿನಿಂದ ಬಹುನಷ್ಟ ಅನುಭವಿಸುತ್ತಿದ್ದಾರೆ. ತಿತಿಮತಿ ಗ್ರಾಮದಲ್ಲಿ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರವಿದ್ದರೂ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಈ ಕಾರಣ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಅಸಾಧ್ಯವಾಗಿದೆ ಎಂದು ರೈತರು ಆಪಾದಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಈ ಭಾಗದ ಜನತೆ ಖಾಯಂ ಪಶುವೈದ್ಯಾಧಿಕಾರಿಗಳನ್ನು ನೀಡುವಂತೆ ಮನವಿ ಸಲ್ಲಿಸುತ್ತಾ ಬಂದರೂ ಸ್ಪಂದನ ದೊರೆತ್ತಿಲ್ಲ. ಬಾಳೆಲೆ ಹೋಬಳಿಗೆ ಸೇರಿದಂತೆ ತಿತಿಮತಿ ಗ್ರಾಮಕ್ಕೂ ಒಬ್ಬರೇ ವೈದ್ಯಾಧಿಕಾರಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸರಿಯಾದ *ಗೋಣಿಕೊಪ್ಪಲು, ಫೆ. ೫: ಜಾನುವಾರುಗಳ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ತಿತಿಮತಿ ಭಾಗದ ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಾನುವಾರುಗಳ ಸಾವಿನಿಂದ ಬಹುನಷ್ಟ ಅನುಭವಿಸುತ್ತಿದ್ದಾರೆ. ತಿತಿಮತಿ ಗ್ರಾಮದಲ್ಲಿ ಪಶುವೈದ್ಯಕೀಯ ಚಿಕಿತ್ಸಾ ಕೇಂದ್ರವಿದ್ದರೂ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಕಾಡುತ್ತಿದೆ. ಈ ಕಾರಣ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಅಸಾಧ್ಯವಾಗಿದೆ ಎಂದು ರೈತರು ಆಪಾದಿಸುತ್ತಿದ್ದಾರೆ.
ಹಲವು ವರ್ಷಗಳಿಂದ ಈ ಭಾಗದ ಜನತೆ ಖಾಯಂ ಪಶುವೈದ್ಯಾಧಿಕಾರಿಗಳನ್ನು ನೀಡುವಂತೆ ಮನವಿ ಸಲ್ಲಿಸುತ್ತಾ ಬಂದರೂ ಸ್ಪಂದನ ದೊರೆತ್ತಿಲ್ಲ. ಬಾಳೆಲೆ ಹೋಬಳಿಗೆ ಸೇರಿದಂತೆ ತಿತಿಮತಿ ಗ್ರಾಮಕ್ಕೂ ಒಬ್ಬರೇ ವೈದ್ಯಾಧಿಕಾರಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಸರಿಯಾದ ಸಮಯಕ್ಕೆ ವೈದ್ಯಾಧಿಕಾರಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ದಿನದ ಹಿಂದೆ ಗ್ರಾಮದ ಶಿವಣ್ಣ ಎಂಬವರ ಕರುವೊಂದು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ನೀಡಲು ತಿತಿಮತಿ ಪಶು ವೈದ್ಯಕೀಯ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಸರಿಯಾದ ಸಮಯಕ್ಕೆ ವೈದ್ಯರಿಲ್ಲದೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಹಸು ಸಾವನಪ್ಪಿದೆ ಎಂದು ಶಿವಣ್ಣ ಅವರು ಆರೋಪಿಸಿದ್ದಾರೆ. ಹೀಗಾಗಿ ನನ್ನ ಕರುವೊಂದು ಸಾವನಪ್ಪಿದೆ ಎಂದು ತಿಳಿಸಿದ್ದಾರೆ.
ತಿತಿಮತಿ ಪಶು ವೈದ್ಯಕೀಯ ಆಸ್ಪತ್ರೆಯ ಮುಚ್ಚಿದ ಬಾಗಿಲು ತೆರೆಯುವುದೇ ಇಲ್ಲ. ಮೇಲಾಧಿಕಾರಿಗಳಿಗೆ ಈ ಸಂಬAಧವಾಗಿ ಮಾತನಾಡಿದರೆ ವೈದ್ಯರಿಲ್ಲ ಎಂಬ ಉತ್ತರ ಬರುತ್ತದೆ. ಸರ್ಕಾರ ವೈದ್ಯರ ಕೊರತೆಯಿರುವ ಪಶು ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಖಾಯಂ ವೈದ್ಯರು ಮತ್ತು ಸಿಬ್ಬಂದಿಗಳೂ ನೇಮಕವಾಗದಿದ್ದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಕೂಡ ಎಚ್ಚರಿಸಿದ್ದಾರೆ. -ಎನ್.ಎನ್. ದಿನೇಶ್