*ಗೋಣಿಕೊಪ್ಪ, ಫೆ. ೫: ತಿತಿಮತಿ - ಗೋಣಿಕೊಪ್ಪ ಮಾರ್ಗಮಧ್ಯದ ದೇವರಪುರದಲ್ಲಿ ಬಿಸ್ಕೆಟ್ ತುಂಬಿ ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ.
ಬೆಂಗಳೂರಿAದ ಕೇರಳಕ್ಕೆ ಲಾರಿಯಲ್ಲಿ ಬಿಸ್ಕೆಟ್ ಸಾಗಿಸಲಾಗುತ್ತಿತ್ತು ದೇವರಪುರದ ಮಾರ್ಗದ ತಿರುವಿನಲ್ಲಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಬಿದ್ದಿದೆ. ನಿಯಂತ್ರಣ ತಪ್ಪಿದ ಲಾರಿ ಎರಡು ವಿದ್ಯುತ್ ಕಂಬಗಳಿಗೆ ಅಪ್ಪಳಿಸಿ ಮಗುಚಿ ಕೊಂಡಿದೆ.
ರಸ್ತೆ ತಿರುವಿನಲ್ಲಿ ಯಾವುದೇ ಸೂಚನೆಗಳು ಅಳವಡಿಸಿದೆ ಇರುವುದರಿಂದ ಈ ಭಾಗದಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.