ಮಡಿಕೇರಿ, ಫೆ. ೫: ನಗರದ ಬ್ರಾಹ್ಮಣರ ಬೀದಿಯಲ್ಲಿನ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆವರಣದಲ್ಲಿ ತಾ.೭ ರಂದು ಶತಮಾನ ಭವನದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಿರ್ಮಿಸಲಾಗುತ್ತಿರುವ ನೂತನ ‘ಶತಮಾನ ಭವನ’ ಕಟ್ಟಡದ ಪ್ರಗತಿಯ ಕುರಿತು ಬೆಳಿಗ್ಗೆ ೧೦:೩೦ ಕ್ಕೆ ಸಭೆ ನಡೆಯಲಿದ್ದು, ಇದಕ್ಕೂ ಮುನ್ನ ೮ ಗಂಟೆಗೆ ರುದ್ರಪಠಣ ಹಾಗೂ ೯:೩೦ ಗೆ ಕುಂಕುಮಾರ್ಚನೆ ನಡೆಯಲಿದೆ ಎಂದು ಶತಮಾನ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ ಎ. ತಿಳಿಸಿದ್ದಾರೆ.