*ಗೋಣಿಕೊಪ್ಪಲು, ಫೆ. ೫: ಎಮಿಗನ್ನೂರು ಫುಟ್ಬಾಲ್ ಅಸೋಸಿಯೇಷನ್ (ವೈ.ಎಫ್.ಎ.) ಆಶ್ರಯದಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ೯ ಮಂದಿ ಕೊಡಗು ಆಟಗಾರರನ್ನು ಒಳಗೊಂಡ ನೈಕ್ ಫುಟ್ಬಾಲ್ ಕ್ಲಬ್ (ಎನ್.ಎಫ್.ಸಿ.) ತಂಡ ಪ್ರತಿಷ್ಠಿತ 'ಎಮ್ಮಿಗನೂರ್ ಫುಟ್ಬಾಲ್ ಕಪ್-೨೦೨೧ ಪಡೆದುಕೊಳ್ಳುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಮಿಗನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯಾವಳಿಯ ಫೈನಲ್ಸ್ನಲ್ಲಿ ಹಾಸನ ಮೂಲದ ನೈಕ್ ಫುಟ್ಬಾಲ್ ಕ್ಲಬ್ ತಂಡ, ಫೈನಲ್ ಪ್ರವೇಶಿಸಿದ್ದ ಆತಿಥೇಯ ತಂಡವನ್ನು ೪-೨ ಗೋಲುಗಳಿಂದ ಮಣಿಸಿ ವಿಜಯದ ಮಾಲೆಯನ್ನು ತನ್ನದಾಗಿಸಿಕೊಂಡಿತು. ಅಲ್ಲದೆ ವಿಜೇತ ತಂಡ ರೂ. ೧ ಲಕ್ಷ ಮೊತ್ತದ ನಗದು ಬಹುಮಾನ ಸೇರಿದಂತೆ ಪಾರಿತೋಷಕವನ್ನು ಪಡೆದುಕೊಂಡಿತು.
ಚಾAಪಿಯನ್ ತಂಡದಲ್ಲಿ ಕೊಡಗು ಮೂಲದ ಆಟಗಾರರಾದ ಎನ್.ಡಿ. ಧನುಷ್, ರತೀಶ್, ಸೀನಾ ಪ್ರವೀಣ್, ಪಗಿನ್, ಜುನೈದ್ ಪವನ್, ಅಭಿಷೇಕ ಮತ್ತು ನೈಕ್ ಫುಟ್ಬಾಲ್ ಕ್ಲಬ್ ತಂಡದ ಪರವಾಗಿ ಅತಿಥಿ ಆಟಗಾರರಾಗಿ ಪಾಲ್ಗೊಂಡು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಿಜೇತ ತಂಡದ, ಮೂಲvಃÀ ಪಾಲಿಬೆಟ್ಟದವರಾದ ಪಿಟ್ಟಿ ಪ್ರವೀಣ್ ಪಂದ್ಯಾವಳಿಯ 'ಅತ್ಯುತ್ತಮ ಆಟಗಾರ'ನೆಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದಾರೆ. ಒಟ್ಟು ೫ ದಿನಗಳ ಕಾಲ ನಡೆದ ಈ ಪಂದ್ಯಾವಳಿಯಲ್ಲಿ ದೇಶದ ವಿವಿಧೆಡೆಗಳಿಂದ ೪೫ ತಂಡಗಳು ಪಾಲ್ಗೊಂಡಿದ್ದವು.