ಮಡಿಕೇರಿ ಜ.೨೭ : ಕಾನೂನು ಮಾಪನಶಾಸ್ತç ಇಲಾಖೆ ವತಿಯಿಂದ ತಾತ್ಕಾಲಿಕ ಸತ್ಯಾಪನೆ ಮುದ್ರೆ ಶಿಬಿರವು ತಾ. ೨೮ ರಿಂದ (ಇಂದಿನಿAದ) ಫೆಬ್ರವರಿ, ೬ ರವರೆಗೆ ಸಿದ್ದಾಪುರದ ಪ್ಲಾಟಿನಂ ಪ್ಲಾಜಾ ಇಲ್ಲಿ ಏರ್ಪಡಿಸಲಾಗಿದೆ. ವರ್ತಕರು ಉಪಯೋಗಿಸುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಬಹುದು ಎಂದು ಕಾನೂನು ಮಾಪನ ಶಾಸ್ತç ಇಲಾಖೆಯ ನಿರೀಕ್ಷಕ ವಿ.ಟಿ.ಜಗದೀಶ್ ಕುಮಾರ್ ಅವರು ತಿಳಿಸಿದ್ದಾರೆ.