ಮಡಿಕೇರಿ, ಜ. ೨೭: ಗೋಪಾಲಪುರದ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಪ್ರಯುಕ್ತ ತಾ. ೨೮ ರಂದು (ಇಂದು) ಬೆಳಿಗ್ಗೆ ೧೦ ಗಂಟೆಗೆ ಮಹಾಗಣಪತಿ, ಶ್ರೀ ವೀರಭದ್ರ ಸ್ವಾಮಿ, ನವಗ್ರಹ ಪೂಜೆ ಶ್ರೀ ಅಮ್ಮನವರಿಗೆ ಫಲ ಪೂಜೆ, ಅಭಿಷೇಕ, ದುರ್ಗಾ ಸೂಕ್ತ, ಶ್ರೀ ಸೂಕ್ತ ಜಲಾಭಿಷೇಕ, ೧೧ಕ್ಕೆ ನವಗ್ರಹ ಪೂಜೆ, ದುರ್ಗಾ ಪೂಜೆ, ಶ್ರೀ ಲಕ್ಷಿ÷್ಮನಾರಾಯಣ ಪೂಜೆ ೧೧.೩೦ಕ್ಕೆ ಮಹಾಗಣಪತಿ ಪೂಜೆ, ದುರ್ಗಾ ಹೋಮ ೧ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಎಂದು ದೇವಾಲಯ ಸಮಿತಿ ತಿಳಿಸಿದೆ.